ದೆಹಲಿ: ಕ್ಯಾನ್ಸರ್ ಪೀಡಿತ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸಿದ ಅಮೆರಿಕನ್ ಏರ್‌ಲೈನ್ಸ್
Team Udayavani, Feb 5, 2023, 7:44 PM IST
ನವದೆಹಲಿ: ಕ್ಯಾನ್ಸರ್ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯನ್ನು ವಿಮಾನದಿಂದ ಕೆಳಗೆ ಇಳಿಸಿದ ಅಮಾನವೀಯ ಪ್ರಕರಣ ನವದೆಹಲಿಯಲ್ಲಿ ನಡೆದಿದೆ.
ಅಮೆರಿಕ ಏರ್‌ಲೈನ್ಸ್ ವಿಮಾನದ ಸಿಬ್ಬಂದಿಯ ಬಳಿ ಮೀನಾಕ್ಷಿ ಸೇನ್ ಗುಪ್ತಾ ಎಂಬುವರು ತಮ್ಮ ಹ್ಯಾಂಡ್‌ಬ್ಯಾಗ್ ಅನ್ನು ಮೇಲಿಡಲು ಸಹಾಯ ಕೋರಿದ್ದರು. ಅದು ಭಾರ ಇದ್ದ ಕಾರಣ ಗಗನ ಸಖೀಯ ನೆರವು ಕೋರಿದ್ದರು. ಆದರೆ, ವಿಮಾನದ ಸಿಬ್ಬಂದಿ ಸಹಾಯ ಮಾಡುವುದರ ಬದಲಾಗಿ, ಇದು ತಮ್ಮ ಕೆಲಸವಲ್ಲ ಎಂದು ಹೇಳಿದ್ದಾರೆ.
ಮೀನಾಕ್ಷಿ ಅವರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ. ಜ.30ರಂದು ಘಟನೆ ನಡೆದಿದ್ದು, ಈ ಕುರಿತು ದೂರು ದಾಖಲಿಸಿದ್ದಾರೆ. ಭಾರತದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ದೂರನ್ನು ಪರಿಗಣಿಸಿದ್ದು,ಈ ಬಗ್ಗೆ ವರದಿ ನೀಡುವಂತೆ ಅಮೆರಿಕ ಏರ್‌ಲೈನ್ಸ್‌ಗೆ ಸೂಚನೆ ನೀಡಿದೆ.