ನಷ್ಟವನ್ನು ಸರಿದೂಗಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರಿ ಏರಿಕೆ ಸಾಧ್ಯತೆ
Team Udayavani, Mar 7, 2022, 6:15 PM IST
ಹೊಸದಿಲ್ಲಿ: ಪಂಚರಾಜ್ಯ ಚುನಾವಣೆ ಮುಗಿದಿದ್ದು,ತೈಲ ಕಂಪನಿಗಳು ಈ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಎಲ್ಲಾ ಸಾಧ್ಯತೆಯಿದೆ.
ರಷ್ಯಾ -ಉಕ್ರೇನ್ ಯುದ್ಧದ ವೇಳೆ ಅಂತರ್ ರಾಷ್ಟ್ರೀಯ ತೈಲ ಬೆಲೆ ಜಿಗಿತದ ನಡುವೆಯೂ ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ ನಾಲ್ಕು ತಿಂಗಳ ಕಾಲ ದರವನ್ನು ಸ್ಥಿರವಾಗಿರಿಸಿದ್ದರಿಂದ ಆದ ನಷ್ಟವನ್ನು ಸರಿದೂಗಿಸಲು ತೈಲ ಕಂಪೆನಿಗಳು ಮುಂದಾಗಿವೆ.ಅಂತರ್ ರಾಷ್ಟ್ರೀಯ ಕಚ್ಚಾ ತೈಲ ಬೆಲೆ 13 ವರ್ಷಗಳ ಬಳಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಪ್ರತಿ ಬ್ಯಾರೆಲ್ಗೆ 140 ಡಾಲರ್ ರಂತೆ ಮಾರಾಟವಾಗುತ್ತಿದೆ.
ಅಮೆರಿಕಾ ತೈಲ ಬೆಲೆ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ನಲ್ಲಿ ಭಾನುವಾರ ಸಂಜೆ ಪ್ರತಿ ಬ್ಯಾರೆಲ್ಗೆ 130.50 ಡಾಲರ್ ಗೆ ಏರಿಕೆಯಾಗಿದೆ, ಇದು ಜುಲೈ 2008 ರಿಂದ ಏರಿಕೆಯಾದ ಅತ್ಯಧಿಕ ದರವಾಗಿದೆ. ಅಂತರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕ್ರೂಡ್, ರಾತ್ರಿಯ ಒಂದು ಹಂತದಲ್ಲಿ 139.13 ಡಾಲರ್ ರಷ್ಟು ಗರಿಷ್ಠ ಮಟ್ಟವನ್ನು ಮುಟ್ಟಿದೆ.
ಇನ್ನೊಂದೆಡೆ ಭಾರತೀಯ ರೂಪಾಯಿ ಮೌಲ್ಯ ಸೋಮವಾರ ಪ್ರತಿ ಡಾಲರ್ಗೆ ದಾಖಲೆಯ ಕನಿಷ್ಠ 76.9812 ಕ್ಕೆ ಕುಸಿದಿದೆ.
ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ (ಪಿಪಿಎಸಿ) ಮಾಹಿತಿಯ ಪ್ರಕಾರ ಭಾರತವು ಖರೀದಿಸುವ ಕಚ್ಚಾ ತೈಲದ ದರ ಮಾರ್ಚ್ 1 ರಂದು ಪ್ರತಿ ಬ್ಯಾರೆಲ್ಗೆ 111 ಡಾಲರ್ ಗಿಂತ ಹೆಚ್ಚಿದೆ.
ಸೋಮವಾರ ದೆಹಲಿಯಲ್ಲಿ ಪೆಟ್ರೋಲ್ ದರ 95.41ರೂ. ಇದ್ದರೆ ಡೀಸೆಲ್ ದರ 86.67 ರೂ. ಇದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 104.67 ರೂ. ಇದ್ದರೆ ಡೀಸೆಲ್ ದರ 89.79 ರೂ. ಇದೆ.ಮುಂಬಯಿಯಲ್ಲಿ ಪೆಟ್ರೋಲ್ ದರ 109.98 ರೂ. ಇದ್ದರೆ ಡೀಸೆಲ್ ದರ 94.14 ರೂ. ಇದೆ.ಬೆಂಗಳೂರಿನಲ್ಲಿ ಪೆಟ್ರೋಲ್ ದರ 100.58 ರೂ. ಇದ್ದರೆ ಡೀಸೆಲ್ ದರ 85.01ರೂ. ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್