
ಶ್ರೀನಿವಾಸ ಸಾಗರ ಜಲಾಶಯ ಹಿಂಭಾಗದಲ್ಲಿ ಫೋಟೋ ಶೂಟ್; 3 ವಿದ್ಯಾರ್ಥಿಗಳು ನೀರುಪಾಲು
ಇಬ್ಬರು ವಿದ್ಯಾರ್ಥಿನಿಯರು, ಓರ್ವ ವಿದ್ಯಾರ್ಥಿ ಮೃತ್ಯು... ಮೂವರು ಪಾರು
Team Udayavani, Apr 1, 2023, 5:21 PM IST

ಚಿಕ್ಕಬಳ್ಳಾಪುರ : ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದ ಹಿಂಭಾಗದಲ್ಲಿ ನೀರಿನ ಆಳ ಕಡಿಮೆ ಇದೆ ಎಂದು ಭಾವಿಸಿ ಫೋಟೋ ಶೂಟ್ ಮಾಡಲು ಕೆಳಗಿಳಿದ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದು ಇನ್ನುಳಿದ ಮೂವರು ನೀರಿನಲ್ಲಿ ಇಳಿಯದೆ ಪಾರಾಗಿರುವ ಘಟನೆ ಶನಿವಾರ ನಡೆದಿದೆ.
ಬೆಂಗಳೂರಿನ ಹೆಗಡೆ ನಗರದಲ್ಲಿರುವ ಕಾಲೇಜಿನಲ್ಲಿ ಡಿಫಾರ್ಮಾ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪೂಜಾ(21), ರಾಧಿಕಾ(21),ಮತ್ತು ಇಮ್ರಾನ್ ಖಾನ್(21) ಎಂಬುವರು ಮೃತ ದುರ್ದೈವಿಗಳು.
ಕಾಲೇಜಿನ ಆರು ಜನ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯ ಬಳಿ ಬಂದಿದ್ದು, ಈ ವೇಳೆಯಲ್ಲಿ ಜಲಾಶಯ ಹಿಂಭಾಗದಲ್ಲಿ ನೀರಿನ ಆಳ ಕಡಿಮೆ ಇದೆ ಎಂದು ಫೋಟೋ ಸೆರೆಹಿಡಿಯಲು ಹೋಗಿ ಆಳವಾಗಿರುವ ಜಾಗದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮತ್ತೊಂದೆಡೆ ಬಿಕಾಶ್, ರಾಮು ಹಾಗೂ ಸುನಿತಾ ನೀರಿನಲ್ಲಿ ಇಳಿಯದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಪ್ರದೀಪ್ ಪೂಜಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
