
ಬಾಯಲ್ಲಿ ಇಟ್ಟರೆ ಬೆಣ್ಣೆ ತರ ಕರಗುವ ಮೃದುವಾದ ಪೈನಾಪಲ್ ಕೇಸರಿಬಾತ್ ರೆಸಿಪಿ…
ಶ್ರೀರಾಮ್ ನಾಯಕ್, Jan 27, 2023, 5:58 PM IST

ಅನಾನಸ್ ನೋಡಲು ಮುಳ್ಳು ಮುಳ್ಳಾಗಿದ್ದರೂ, ತಿನ್ನಲು ಬಲು ರುಚಿಯಾದ ಹಣ್ಣು. ತಿನ್ನಲಷ್ಟೇ ಅಲ್ಲ, ಸಿಹಿತಿಂಡಿಗಳ ತಯಾರಿಕೆಯಲ್ಲೂ ಅನಾನಸ್ ಅನ್ನು ಬಳಸುತ್ತಾರೆ. ಉದಾಃ ಜ್ಯೂಸ್, ಹೋಳಿಗೆ, ಜಾಮ್, ಸಾರು, ಸಲಾಡ್, ಕೇಸರಿ ಬಾತ್, ಐಸ್‌ಕ್ರೀಮ್ ಹೀಗೆ ನಾನಾ ರುಚಿಯ ಆಹಾರ ಮಾಡಿ ಸವಿಯಬಹುದು. ಈ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ಇದರಲ್ಲಿ ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಹಾಗೂ ದೇಹಕ್ಕೆ ಅಗತ್ಯವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದೆ .
ಹಾಗಾದರೆ ನಾವಿಂದು ಅನಾನಸ್ ನಿಂದ ಕೇಸರಿ ಬಾತ್ ಮಾಡುವ ವಿಧಾನವನ್ನು ನಿಮಗಾಗಿ ಪ್ರಸ್ತುತಪಡಿಸುತ್ತೇವೆ. ನೀವೂ ಸಹ ಈ ರೆಸಿಪಿಯನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಸ್ವಾಧಿಷ್ಟವಾಗಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು
ಅನಾನಸ್ ಪ್ಯೂರಿ 1 ಕಪ್, ಸಕ್ಕರೆ 4 ಚಮಚ , ಹಾಲು 1 ಕಪ್, ಬಾಂಬೆ ರವೆ 1 ಕಪ್, ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್, ತುಪ್ಪ- 4 ಚಮಚ, ಕೇಸರಿ- ಕೆಲವು ಎಸಳು(ಕೇಸರಿ ಬಣ್ಣ ಸ್ವಲ್ಪ), ದ್ರಾಕ್ಷಿ-ಗೋಡಂಬಿ-ಸ್ವಲ್ಪ.
ತಯಾರಿಸುವ ವಿಧಾನ
-ಮೊದಲಿಗೆ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಅನಾನಸ್ ಪ್ಯೂರಿ ಹಾಕಿ, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿರಿ.
-ಇನ್ನೊಂದು ಬಾಣಲೆ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ, ನಂತರ ರವೆಯನ್ನು ಸೇರಿಸಿ ಗುಲಾಬಿ ಬಣ್ಣಕ್ಕೆ ತಿರುಗುವವರೆಗೆ ಕೈಯಾಡಿಸುತ್ತಾ ಹುರಿಯಿರಿ.
-ಈಗ ರವೆಗೆ ಹಾಲನ್ನು ಹಾಕಿ, ಅಗತ್ಯವಿದ್ದರೆ ನೀರನ್ನು ಸೇರಿಸಿ ಕಲಸಿಕೊಳ್ಳಿ.
-ಆ ಮೇಲೆ ಸಕ್ಕರೆ, ಕೇಸರಿ ಬಣ್ಣ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
-ನಂತರ ಅನಾನಸ್ ಪ್ಯೂರಿಯನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ಬೇಯಿಸಿ.
-ತದ ನಂತರ ಒಂದು ಚಮಚ ತುಪ್ಪ ಸೇರಿಸಿ. ಏಲಕ್ಕಿ ಪುಡಿ ಮತ್ತು ದ್ರಾಕ್ಷಿ,ಗೋಡಂಬಿ ಸೇರಿಸಿ ಮಿಶ್ರ ಮಾಡಿ.
-ಕೇಸರಿ ಎಸಳಿನಿಂದ ಅಲಂಕರಿಸಿ . ರುಚಿಯಾದ ಅನಾನಸ್ ಕೇಸರಿಬಾತ್ ಸವಿಯಲು ಸಿದ್ಧವಾಗಿದೆ.
*ಶ್ರೀರಾಮ್ ನಾಯಕ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾವ್! ಏನ್ ರುಚಿ ಈ ಸಿಗಡಿ ಘೀ ರೋಸ್ಟ್..ಸಿಗಡಿ ತಂದರೆ ಒಮ್ಮೆ ಹೀಗೆ ಮಾಡಿ ನೋಡಿ…

ಮೇರು ಗಾಯಕ; ಕಿರಾಣಾ ಘರಾಣಾ ಶೈಲಿಯ ಕೊಂಡಿ ಜಯತೀರ್ಥ ಮೇವುಂಡಿ

ಎಚ್ಚರ…ಬಿಸಿಲ ಬೇಗೆಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಳ; ಅಗತ್ಯವಾಗಿ ಈ ಆಹಾರ ಸೇವಿಸಿ

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ