ಪೃಥ್ವಿ ಶಾ ಎದೆ ಮತ್ತು ತೋಳುಗಳ ಮೇಲೆ ಹೊಡೆದರು; ಬಂಧಿತ ಆರೋಪಿ ಸಪ್ನಾ ಗಿಲ್
Team Udayavani, Feb 17, 2023, 9:35 PM IST
ಮುಂಬಯಿ : ಸೆಲ್ಫಿ ಕ್ಲಿಕ್ಕಿಸುವ ವಿಚಾರದಲ್ಲಿ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರೊಡನೆ ಅಮಾನುಷವಾಗಿ ವರ್ತಿಸಿದ ಆರೋಪದ ಮೇಲೆ ಬಂಧಿತರಾಗಿರುವ ಸಾಮಾಜಿಕ ಮಾಧ್ಯಮದ ಪ್ರಭಾವಿ ಸಪ್ನಾ ಗಿಲ್ ಶುಕ್ರವಾರ ನ್ಯಾಯಾಲಯದ ಮುಂದೆ ”ತನಗೆ ಹೊಡೆದದ್ದು ಪೃಥ್ವಿ ಶಾ ಅವರೇ” ಎಂದು ಹೇಳಿಕೊಂಡಿದ್ದಾರೆ.
”ಶಾ ನನ್ನಲ್ಲಿ ಕ್ಷಮೆಯಾಚಿಸಿದರು ಮತ್ತು ಅವರ ಸ್ನೇಹಿತ ಪೊಲೀಸ್ ದೂರು ನೀಡದಂತೆ ಕೇಳಿಕೊಂಡರು” ಎಂದು ಅವರು ಹೇಳಿದ್ದಾರೆ.
ಗುರುವಾರ ಬಂಧನಕ್ಕೊಳಗಾದ ಗಿಲ್ ಅವರನ್ನು ಶುಕ್ರವಾರ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆಕೆಯನ್ನು ಫೆಬ್ರವರಿ 20ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಉಪನಗರ ಸಾಂತಾಕ್ರೂಜ್ನ ಐಷಾರಾಮಿ ಹೋಟೆಲ್ನ ಹೊರಗೆ ಬುಧವಾರ ಕ್ರಿಕೆಟಿಗ ಶಾ ಆಕೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ನಿರಾಕರಿಸಿದ ನಂತರ
ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತನ ನಡುವೆ ವಾಗ್ವಾದದ ಸಂದರ್ಭದಲ್ಲಿ ಘಟನೆ ನಡೆದಿತ್ತು.
ರಿಮಾಂಡ್ ವಿಚಾರಣೆಯ ಸಮಯದಲ್ಲಿ, ಮ್ಯಾಜಿಸ್ಟ್ರೇಟ್ ಅನುಮತಿಸಿದ ಘಟನೆಯ ತನ್ನ ಆವೃತ್ತಿಯನ್ನು ಮುಂದಿಡಲು ಅವಕಾಶ ನೀಡಬೇಕೆಂದು ಗಿಲ್ ವಿನಂತಿಸಿದ್ದಾರೆ.
ಆಕೆಯ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು,ಶಾ ನನ್ನ ಎದೆ ಮತ್ತು ತೋಳುಗಳ ಮೇಲೆ ಹೊಡೆದರು ಎಂದು ಗಿಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ