ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ
Team Udayavani, Feb 24, 2021, 11:20 PM IST
ಮುಂಬೈ: ಇನ್ನು ಮಂದೆ ಖಾಸಗಿ ಬ್ಯಾಂಕುಗಳು ಕೂಡ ಸರ್ಕಾರಕ್ಕೆ ಸಂಬಂಧಿಸಿದ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಬಹುದಾಗಿದೆ. ಈವರೆಗೆ ಇಂಥ ವಹಿವಾಟುಗಳನ್ನು ನಡೆಸಲು ಖಾಸಗಿ ಬ್ಯಾಂಕುಗಳಿಗೆ ಇದ್ದ ನಿರ್ಬಂಧವನ್ನು ಈಗ ಕೇಂದ್ರ ಸರ್ಕಾರ ತೆರವುಗೊಳಿಸಿದೆ.
ಇದರಿಂದಾಗಿ, ತೆರಿಗೆಗಳು, ಇತರೆ ಕಂದಾಯ ಪಾವತಿ ವ್ಯವಸ್ಥೆಗಳು, ಪಿಂಚಣಿ ಪಾವತಿ, ಸಣ್ಣ ಉಳಿತಾಯ ಯೋಜನೆಗಳು ಮತ್ತಿತರ ಸರ್ಕಾರ ಸಂಬಂಧಿ ವಹಿವಾಟುಗಳನ್ನು ನಡೆಸಲು ಎಲ್ಲ ಖಾಸಗಿ ಬ್ಯಾಂಕುಗಳಿಗೂ ಮುಕ್ತ ಅವಕಾಶ ನೀಡಿದಂತಾಗಿದೆ. ಈವರೆಗೆ ಕೆಲವೇ ಕೆಲವು ಖಾಸಗಿ ಬ್ಯಾಂಕುಗಳಿಗಷ್ಟೇ ಈ ಅವಕಾಶವಿತ್ತು. ಆದರೆ, ಈಗ ನಿರ್ಬಂಧವನ್ನು ತೆರವುಗೊಳಿಸಿರುವ ಕಾರಣ, ಎಲ್ಲ ಖಾಸಗಿ ವಲಯದ ಬ್ಯಾಂಕುಗಳು ಕೂಡ ದೇಶದ ಆರ್ಥಿಕತೆ, ಸಾಮಾಜಿಕ ವಲಯದ ಅಭಿವೃದ್ಧಿಯಲ್ಲಿ ಕೈಜೋಡಿಸಬಹುದಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
ಜತೆಗೆ, ಈ ನಿರ್ಧಾರದಿಂದಾಗಿ ಗ್ರಾಹಕರಿಗೆ ಅನುಕೂಲವಾಗಲಿದ್ದು, ಸ್ಪರ್ಧೆಯೂ ಹೆಚ್ಚುತ್ತದೆ ಮತ್ತು ಗ್ರಾಹಕ ಸೇವಾ ಗುಣಮಟ್ಟದಲ್ಲಿ ಹೆಚ್ಚಿನ ದಕ್ಷತೆ ಮೂಡಲು ಸಾಧ್ಯ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ:ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ
ಷೇರುಪೇಟೆಗೆ ವರದಾನ; ಸೆನ್ಸೆಕ್ಸ್ ಜಿಗಿತ
ಸರ್ಕಾರಿ ವಹಿವಾಟು ನಡೆಸಲು ಖಾಸಗಿ ಬ್ಯಾಂಕುಗಳಿಗಿದ್ದ ನಿರ್ಬಂಧ ತೆರವಾಗಿದ್ದು ಬುಧವಾರ ಮುಂಬೈ ಷೇರುಪೇಟೆಯಲ್ಲಿ ಮಿಂಚಿನ ಸಂಚಲನ ಉಂಟುಮಾಡಿತು. ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರಗಳ ಖರೀದಿ ಭರಾಟೆಯಲ್ಲಿ ಹೂಡಿಕೆದಾರರು ತೊಡಗಿದ ಕಾರಣ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,030.28 ಅಂಕಗಳ(ಶೇ.2.07) ಏರಿಕೆ ದಾಖಲಿಸಿ, ದಿನಾಂತ್ಯಕ್ಕೆ 50,781.69ರಲ್ಲಿ ವಹಿವಾಟು ಕೊನೆಗೊಳಿಸಿತು. ನಿಫ್ಟಿ 274.20 ಅಂಕಗಳಷ್ಟು ಹೆಚ್ಚಳವಾಗಿ, 14,982ರಲ್ಲಿ ಅಂತ್ಯಗೊಂಡಿತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಆ್ಯಕ್ಸಿಸ್ ಬ್ಯಾಂಕ್ ಅತಿ ಹೆಚ್ಚು ಲಾಭ ಗಳಿಸಿದರೆ, ಎಚ್‌ಡಿಎಫ್ಸಿ ಬ್ಯಾಂಕ್, ಎಚ್‌ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಎಸ್‌ಬಿಐ ಷೇರು ಮೌಲ್ಯಗಳೂ ಜಿಗಿತ ಕಂಡವು.
ತಾಂತ್ರಿಕ ದೋಷದಿಂದ ತೊಂದರೆ
ಬುಧವಾರ ವಹಿವಾಟು ಆರಂಭವಾದ ಬಳಿಕ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್(ಎನ್ಎಸ್‌ಇ)ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ವಹಿವಾಟನ್ನು ಅರ್ಧಕ್ಕೇ ಸ್ಥಗಿತಗೊಳಿಸಬೇಕಾದ ಸ್ಥಿತಿ ಎದುರಾಯಿತು. ಇನ್ನೇನು ಮಧ್ಯಾಹ್ನ 3.30ಕ್ಕೆ ಎಂದಿನಂತೆ ವಹಿವಾಟಿನ ಅವಧಿ ಮುಗಿಯುತ್ತದೆ ಎಂದುಕೊಳ್ಳುವಾಗಲೇ, ಅವಧಿಯನ್ನು ಸಂಜೆ 5 ಗಂಟೆಯವರೆಗೆ ವಿಸ್ತರಿಸುತ್ತಿರುವುದಾಗಿ ಬಿಎಸ್‌ಇ ಮತ್ತು ಎನ್ಎಸ್‌ಇ ಘೋಷಿಸಿತು.
ಚಿನ್ನದ ದರ ಇಳಿಕೆ
ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ದರ 148 ರೂ. ಇಳಿಕೆಯಾಗಿ, 10 ಗ್ರಾಂಗೆ 46,307 ರೂ. ಆಗಿದೆ. ಬೆಳ್ಳಿ ದರ 886 ರೂ. ಕಡಿಮೆಯಾಗಿ ಕೆಜಿಗೆ 68,676 ರೂ.ಗೆ ತಲುಪಿದೆ. ಈ ನಡುವೆ, ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಏರಿಕೆಯಾಗಿ 72.35ಕ್ಕೆ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2020-21ರ ಆರ್ಥಿಕ ವರ್ಷದಲ್ಲಿ ನಿವ್ವಳ ಪರೋಕ್ಷ ತೆರಿಗೆಯಲ್ಲಿ ಶೇ. 12.3 ರಷ್ಟು ಏರಿಕೆ
2020-21ರ ಆರ್ಥಿಕ ವರ್ಷದ ಅತಿ ಹೆಚ್ಚು ಕಾರುಗಳ ಮಾರಾಟ : ಮಾರುತಿ ಸುಜುಕಿ ಮೇಲುಗೈ
ಭಾರತದ ಆರ್ಥಿಕತೆಗೆ ಗ್ರೀನ್ ಫೈನಾನ್ಸ್ ಸವಾಲು..!?
ಸೈಬರ್ ಅಪರಾಧಿಗಳ ಬಗ್ಗೆ ಎಚ್ಚರವಿರಲಿ : ಗ್ರಾಹಕರಿಗೆ ಎಸ್ ಬಿ ಐ ಮನವಿ
ಫ್ಲಿಪ್ ಕಾರ್ಟ್ ಹಾಗೂ ಅದಾನಿ ಗ್ರೂಪ್ ಒಪ್ಪಂದ : ಉಭಯ ಸಂಸ್ಥೆಗಳ ಮುಂದಿನ ಯೋಜನೆ ಏನು..?
MUST WATCH
ಹೊಸ ಸೇರ್ಪಡೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್
‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು
ಕಾಂಗ್ರೆಸ್ ನಿಂದ ಹೊಸ ಚಾನೆಲ್ “ಐಎನ್ ಸಿ ಟಿವಿ” ಶುರು
ಸವಣೂರು ಗೇಟ್ ಬಳಿ ರೈಲುಹಳಿಯಲ್ಲಿ ಯುವಕನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ!