ಪ್ರೊ ಕಬಡ್ಡಿ ಲೀಗ್: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್
Team Udayavani, Jan 28, 2022, 10:32 PM IST
ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನಲ್ಲಿ 8ನೇ ಜಯ ಸಾಧಿಸಿದ ಪಾಟ್ನಾ ಪೈರೆಟ್ಸ್ ಒಮ್ಮೆಲೇ ಆರರಿಂದ ಎರಡನೇ ಸ್ಥಾನಕ್ಕೆ ನೆಗೆದಿದೆ.
ಶುಕ್ರವಾರದ ಮುಖಾಮುಖಿಯಲ್ಲಿ ಅದು ತಮಿಳ್ ತಲೈವಾಸ್ ವಿರುದ್ಧ 52-24 ಅಂಕಗಳ ಪ್ರಚಂಡ ಗೆಲುವು ಗಳಿಸಿತು.
ಪಾಟ್ನಾ ಒಂದು ತಂಡವಾಗಿ ಆಡಿ ತಲೈವಾಸ್ ಮೇಲೆ ಸವಾರಿ ಮಾಡಿತು. ಮೋನು ಗೋಯತ್ 9, ನಾಯಕ ಪ್ರಶಾಂತ್ ಕುಮಾರ್ ರೈ 8; ಸಚಿನ್, ನೀರಜ್ ಕುಮಾರ್, ಮೊಹಮ್ಮದ್ ರೇಝ ತಲಾ 6, ಸುನೀಲ್ 5 ಅಂಕ ಸಂಪಾದಿಸಿದರು. ತಲೈವಾಸ್ ಪರ ಡಿಫೆಂಡರ್ ಸಾಗರ್ ಗಮನಾರ್ಹ ಪ್ರದರ್ಶನ ನೀಡಿ 8 ಅಂಕ ತಂದಿತ್ತರು.
ಪಾಟ್ನಾ ಒಟ್ಟು 45 ಅಂಕ ಹೊಂದಿದೆ. ಅಗ್ರಸ್ಥಾನಿ ಬೆಂಗಳೂರು ಬುಲ್ಸ್‌ಗಿಂತ ಕೇವಲ ಒಂದಂಕದ ಹಿನ್ನಡೆಯಲ್ಲಿದೆ. ದಬಾಂಗ್ ದಿಲ್ಲಿ 3ಕ್ಕೆ (43), ಹರ್ಯಾಣ 4ಕ್ಕೆ (42), ಮುಂಬಾ 5ಕ್ಕೆ (41) ಮತ್ತು ಬೆಂಗಾಲ್ 6ಕ್ಕೆ ಇಳಿದವು (41 ಅಂಕ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ
ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್: ಮಸ್ಟ್ ವಿನ್ ಗೇಮ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ