
ಅಸ್ವಸ್ಥ ಮಹಿಳೆಯ ರಕ್ಷಣೆ
Team Udayavani, Mar 30, 2023, 5:30 AM IST

ಉಡುಪಿ: ದ.ಕ. ಜಿಲ್ಲೆ ಪುತ್ತೂರಿನ ಕೈಯೂರು ನಿವಾಸಿ ಸುಮತಿ ರೈ (57) ಅವರು ತೀವ್ರ ಅಸ್ವಸ್ಥರಾಗಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸುಮತಿ ಅವರ ಬಗ್ಗೆ ಮಾಹಿತಿ ತಿಳಿದು ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ. ಸುಮತಿ ಅವರ ಇಬ್ಬರು ಪುತ್ರಿಯರು ಅಸಹಾಯಕರಾಗಿದ್ದು, ತಾಯಿಯ ಆರೋಗ್ಯ ಕಾಳಜಿಗೆ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ನೆರವು ನೀಡಲು ನಿರಾಕರಿಸಿದ ಸರಕಾರಿ ಇಲಾಖೆಗಳ ವರ್ತನೆ ಅಮಾನವೀಯ. ಖಂಡನೀಯ. ಅನಾರೋಗ್ಯ ಪೀಡಿತರಾಗಿರುವ ತಾಯಿ ಹಾಗೂ ಕಿರಿ ಮಗಳಿಗೆ ಚಿಕಿತ್ಸೆ ಅಗತ್ಯವಿದೆ. ಸಂಬಂಧಪಟ್ಟ ಇಲಾಖೆಗಳು ತಮ್ಮ ಹೊಣೆಗಾರಿಕೆ ಅರಿತು ಸಹೋದರಿಯ ನೆರವಿಗೆ ಮುಂದಾಗಬೇಕು ಎಂದು ವಿಶು ಶೆಟ್ಟಿ ಅಂಬಲಪಾಡಿ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
