ಡೆಲ್ಲಿ ವಿರುದ್ಧ ಅಬ್ಬರಿಸಿದ ಮೇಯರ್ಸ್‌: ರಾಹುಲ್‌ ನಾಯಕತ್ವದ ಲಕ್ನೋ ಜೈಂಟ್ಸ್‌ಗೆ ಜಯ


Team Udayavani, Apr 2, 2023, 6:44 AM IST

lucknow

ಲಕ್ನೋ: ಶನಿವಾರ ನಡೆದ 2ನೇ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ಬೃಹತ್‌ ಮೊತ್ತ ಗಳಿಸಿತು. 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಅದು 193 ರನ್‌ ಗಳಿಸಿತು. ಡೆಲ್ಲಿಯ ಅಬ್ಬರವನ್ನು ತಡೆಯಲು ಡೇವಿಡ್‌ ವಾರ್ನರ್‌ ಪಡೆಗೆ ಆಗಲಿಲ್ಲ.
ಲಕ್ನೋ ಪರ ನಾಯಕ ಕೆ.ಎಲ್‌.ರಾಹುಲ್‌ ಸಿಡಿಯಲಿಲ್ಲ. ಈಗಾಗಲೇ ಅವರ ಬ್ಯಾಟಿಂಗ್‌ ಬಗ್ಗೆ ಅನುಮಾನಗಳಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಸತತ ವೈಫ‌ಲ್ಯ ಕಂಡು ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಮತ್ತೆ ಲಯಕ್ಕೆ ಮರಳಿದ್ದರು. ಬರೀ ಇಷ್ಟರಲ್ಲೇ ಅವರ ಸ್ಥಿತಿಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಹಾಗಾಗಿ ಐಪಿಎಲ್‌ ಲಯ ರಾಹುಲ್‌ಗ‌ೂ, ಅವರ ತಂಡಕ್ಕೂ ಬಹಳ ನಿರ್ಣಾಯಕವಾಗಿದೆ. 12 ಎಸೆತ ಎದುರಿಸಿದ ಅವರು ಕೇವಲ 8 ರನ್‌ ಗಳಿಸಿದರು!

ಎಲ್ಲರೂ ರಾಹುಲ್‌ ಸಿಡಿಯಬಹುದೆಂದು ನಿರೀಕ್ಷಿಸುತ್ತಿದ್ದಾಗಲೇ ನ್ಯೂಜಿಲೆಂಡ್‌ನ‌ ಕೈಲ್‌ ಮೇಯರ್ಸ್‌ ಮೆರೆದರು. ಅವರು 38 ಎಸೆತಗಳಲ್ಲಿ ಕೇವಲ ಎರಡೇ ಬೌಂಡರಿ ಬಾರಿಸಿದರು. ಆದರೆ 7 ಸಿಕ್ಸರ್‌ಗಳನ್ನು ಚಚ್ಚಿದರು! ಅವರ ಗಳಿಕೆ 73 ರನ್‌ಗಳು. ಇವರನ್ನು ಹೊರತುಪಡಿಸಿದರೆ ನಿಕೋಲಸ್‌ ಪೂರನ್‌ 21 ಎಸೆತಗಳಲ್ಲಿ 36, ಆಯುಷ್‌ ಬದೋನಿ 18 ರನ್‌ ಸಿಡಿಸಿದರು. ಇವರಲ್ಲಿ ಬದೋನಿ ಏಳೇ ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್‌ಗಳನ್ನು ಸಿಡಿಸಿ ತಂಡದ ಮೊತ್ತವನ್ನು ಉಬ್ಬಿಸಲು ನೆರವಾದರು. ಉಳಿದ ಯಾವುದೇ ಬ್ಯಾಟಿಗರೂ ನಿರೀಕ್ಷೆಗೆ ತಕ್ಕಂತೆ ಸಿಡಿಯಲಿಲ್ಲ.

ಡೆಲ್ಲಿ ಬೌಲರ್‌ಗಳು ಇನ್ನೊಂದಷ್ಟು ಪರಿಶ್ರಮ ಹಾಕಿದ್ದರೆ, ಲಕ್ನೋ ಮೊತ್ತವನ್ನು 170ಕ್ಕೆ ನಿಯಂತ್ರಿಸಲು ಸಾಧ್ಯವಿತ್ತು. ಕೈಲ್‌ ಮೇಯರ್ಸ್‌ ಅಬ್ಬರವನ್ನು ನಿಯಂತ್ರಿಸಲು ವಿಫ‌ಲರಾಗಿದ್ದರಿಂದಲೇ ರನ್‌ ಹರಿದುಹೋಗಲು ಕಾರಣವಾಯಿತು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಖಲೀಲ್‌ ಅಹ್ಮದ್‌ ಬೌಲಿಂಗ್‌ ಆರಂಭಿಸಿದರು. ಅವರು 4 ಓವರ್‌ಗಳಲ್ಲಿ 30 ರನ್‌ ನೀಡಿ 2 ವಿಕೆಟ್‌ ಪಡೆದರು. ಚೇತನ್‌ ಸಕಾರಿಯ 4 ಓವರ್‌ಗಳಲ್ಲಿ 53 ರನ್‌ ನೀಡಿ 2 ವಿಕೆಟ್‌ ಪಡೆದರು. ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ತಲಾ 1 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ 193/6 (ಕೈಲ್‌ ಮೇಯರ್ಸ್‌ 73, ನಿಕೋಲಸ್‌ ಪೂರನ್‌ 36, ಖಲೀಲ್‌ ಅಹ್ಮದ್‌ 30ಕ್ಕೆ 2, ಚೇತನ್‌ ಸಕಾರಿಯ 53ಕ್ಕೆ 2).

ಟಾಪ್ ನ್ಯೂಸ್

new parliament interior

New Parliament: ಸಂಸತ್‌ ಭವನ ಒಳಾಂಗಣ ವಿನ್ಯಾಸದಲ್ಲಿ ಮುಂಡರಗಿಯ ಅನಿಲ್‌ ಅಂಗಡಿ ಕೈಚಳಕ

manipur fire

Manipur: ಮಣಿಪುರ ಸಂಘರ್ಷದ ಇತಿಹಾಸ- ಇನ್ನೂ ಆರದ ಗಲಭೆಯ ಬೆಂಕಿ

soren kejri

Politics: ಕೇಜ್ರಿವಾಲ್‌ಗೆ ಸೊರೇನ್‌ ಬೆಂಬಲ

CONGRESS GUARENTEE

Congress Guarantee: ಗ್ಯಾರಂಟಿ ಯೋಜನೆಗೆ ಬೇಕಿದೆ 60 ಸಾವಿರ ಕೋಟಿ ರೂ.

MOHAN BHAGVATH

“ದೇಶದಲ್ಲಿ ಈಗ ಹೊರಗಿನವರಿಲ್ಲ”: RSS ಸರಸಂಘಚಾಲಕ ಮೋಹನ್‌ ಭಾಗವತ್‌

Modi

“ಗುಲಾಮಗಿರಿಗೆ ಅಂತ್ಯಹಾಡಿದ್ದು ಶಿವಾಜಿ”: PM ಮೋದಿ

WTC INDIA

ICC WTC Final: ಫೈನಲ್‌ ಭಾರತದ ಸ್ಪಿನ್‌ ದಾಳಿ ಕುರಿತು ಆಸೀಸ್‌ ಚಿಂತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC INDIA

ICC WTC Final: ಫೈನಲ್‌ ಭಾರತದ ಸ್ಪಿನ್‌ ದಾಳಿ ಕುರಿತು ಆಸೀಸ್‌ ಚಿಂತನೆ

AFGHAN ONE DAY

ಏಕದಿನ: ಲಂಕೆಯನ್ನು ಮಣಿಸಿದ ಅಫ್ಘಾನ್‌

hockey

Junior Asia Cup hockey: ದಾಖಲೆ 4ನೇ ಸಲ ಪ್ರಶಸ್ತಿ ಗೆದ್ದ ಭಾರತ

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

1-sada-dsad

Wrestlers protest : 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಬೆಂಬಲ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

new parliament interior

New Parliament: ಸಂಸತ್‌ ಭವನ ಒಳಾಂಗಣ ವಿನ್ಯಾಸದಲ್ಲಿ ಮುಂಡರಗಿಯ ಅನಿಲ್‌ ಅಂಗಡಿ ಕೈಚಳಕ

manipur fire

Manipur: ಮಣಿಪುರ ಸಂಘರ್ಷದ ಇತಿಹಾಸ- ಇನ್ನೂ ಆರದ ಗಲಭೆಯ ಬೆಂಕಿ

soren kejri

Politics: ಕೇಜ್ರಿವಾಲ್‌ಗೆ ಸೊರೇನ್‌ ಬೆಂಬಲ

CONGRESS GUARENTEE

Congress Guarantee: ಗ್ಯಾರಂಟಿ ಯೋಜನೆಗೆ ಬೇಕಿದೆ 60 ಸಾವಿರ ಕೋಟಿ ರೂ.

MOHAN BHAGVATH

“ದೇಶದಲ್ಲಿ ಈಗ ಹೊರಗಿನವರಿಲ್ಲ”: RSS ಸರಸಂಘಚಾಲಕ ಮೋಹನ್‌ ಭಾಗವತ್‌