
ಅಬಕಾರಿ ಇಲಾಖೆಯಿಂದ ದಾಳಿ – ಜಪ್ತಿ
Team Udayavani, Mar 22, 2023, 5:38 AM IST

ಮಂಗಳೂರು: ಅಬಕಾರಿ ಇಲಾಖೆಯಿಂದ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೂ ಮಂಗಳೂರು ನಗರ ವಾಪ್ತಿಯಲ್ಲಿ ಅಕ್ರಮ ಮಾರಾಟ, ತಯಾರಿಕೆ ಹಾಗೂ ದಾಸ್ತಾನು ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಗಸ್ತು ಕಾರ್ಯಗಳನ್ನು ಮಾ.6ರಿಂದ 20ರವರೆಗೆ ಪರಿಣಾಮಕಾರಿಯಾಗಿ ಕೈಗೊಳ್ಳಲಾಗಿದೆ.
ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮಾ.16ರಂದು ದಾಳಿ ನಡೆಸಿ ಒಟ್ಟು 23,400 ಲೀಟರ್ ಬಿಯರ್, 1 ಆಟೋ ರಿûಾ ಮತ್ತು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮಾ.17ರಂದು ಬೆಳ್ತಂಗಡಿ ತಾಲೂಕಿನಲ್ಲಿ 4.140 ಲೀಟರ್ ಮದ್ಯ ಹಾಗೂ ಒಂದು ವಾಹನವನ್ನು ಜಪ್ತಿಮಾಡಲಾಗಿದೆ. ಮಾ.18ರಂದು 20ಲೀಟರ್ ಶೇಂದಿಯನ್ನು ವಶಪಡಿಸಲಾಗಿದೆ ಹಾಗೂ ಸುಳ್ಯ ತಾಲೂಕಿನಲ್ಲಿ 9.450 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮೂಡಬಿದ್ರೆ ತಾಲೂಕಿನಲ್ಲಿ ಮಾ.19ರಂದು 8.640 ಲೀಟರ್ ಮದ್ಯ ವಶಪಡಿಸಲಾಗಿದೆ. ಮಾ.20ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ ದಾಳಿ ನಡೆಸಿ 16ಲೀಟರ್ ಕಳ್ಳಭಟ್ಟಿ ಹಾಗೂ ಒಂದು ಆರೋಪಿಯನ್ನು ಬಂಧಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ ಒಟ್ಟು 14.170 ಲೀಟರ್ ಮದ್ಯ ಹಾಗೂ 2 ವಾಹನಗಳನ್ನು ಜಪ್ತಿಪಡಿಸಲಾಗಿದೆ. ಜಿಲ್ಲೆಯಲ್ಲಿ 2023ರ ಮಾ.6 ರಿಂದ 20ರ ವರೆಗೆ 210 ಅಬಕಾರಿ ದಾಳಿ ನಡೆಸಿ ಕರ್ನಾಟಕ ಅಬಕಾರಿ ಕಾಯಿದೆಯಡಿ ಒಟ್ಟು 8 ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. 2 ಆರೋಪಿಗಳನ್ನು ಬಂಧಿಸಿ, 4 ವಾಹನಗಳನ್ನು ವಶಪಡಿಸಿಕೊಂಡು, 62.670 ಲೀಟರ್ ಮದ್ಯ 31.700 ಲೀ. ಬಿಯರ್, 20 ಲೀಟರ್ ಶೇಂದಿ, 16 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 1,94,993 ರೂ. ಅಂದಾಜು ಮೊತ್ತದ ಸೊತ್ತುಗಳನ್ನು ಜಪ್ತಿಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
