ಬಾಲಕಿ ಮೇಲೆ ಅತ್ಯಾಚಾರ: ಬಸ್‌ ಚಾಲಕನಿಗೆ 20 ವರ್ಷ ಜೈಲು


Team Udayavani, Mar 22, 2023, 7:30 AM IST

lok adalat

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಾವೂರು ಮರಕಡ ಸಮೀಪದ ನಿವಾಸಿ, ಬಸ್‌ ಚಾಲಕ ದಯಾನಂದ ದಾನಣ್ಣನವರ್‌ (30) ಶಿಕ್ಷೆಗೊಳಗಾದ ಆರೋಪಿ. ಈತ 13 ವರ್ಷದ ಬಾಲಕಿ (ವಿದ್ಯಾರ್ಥಿನಿ)ಯೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡಿದ್ದ. 2022ರ ಜ. 27ರಂದು ಹೊರಗಡೆ ತಿರುಗಾಡುವುದಕ್ಕೆ ಬರುವಂತೆ ಸಂದೇಶ ಕಳುಹಿಸಿದ್ದ. ಬಾಲಕಿ ಇದಕ್ಕೆ ನಿರಾಕರಿಸಿದ್ದಳು. ಆದರೂ ಆಕೆ ಒತ್ತಾಯ ಮಾಡಿ ಪುಸಲಾಯಿಸಿ ಜ. 28ರಂದು ಆಟೋರಿಕ್ಷಾದಲ್ಲಿ ಮಂಗಳೂರಿನ ಹಂಪನಕಟ್ಟೆಗೆ ಕರೆದೊಯ್ದು ಲಾಡ್ಜ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಮನೆ ಬಳಿ ಕರೆತಂದು ಬಿಟ್ಟು ಹೋಗಿದ್ದ.

ಮನೆಯಲ್ಲಿ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಬಾಲಕಿ ಮನೆಯಲ್ಲಿ ನಡೆದ ವಿಷಯ ತಿಳಿಸಿದ್ದಳು. ಮನೆಯವರು ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್ಟಿಎಸ್‌ಸಿ-2 ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಪೋಕ್ಸೋ ಕಲಂ 4ರಡಿ 20 ವರ್ಷ ಜೈಲು, 50,000 ರೂ. ದಂಡ ವಿಧಿಸಿ, ದಂಡ ಪಾವತಿಸಲು ತಪ್ಪಿದರೆ ಮತ್ತೆ 4 ತಿಂಗಳು ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.

ನೊಂದ ಬಾಲಕಿಗೆ 3 ಲ.ರೂ. ಪರಿಹಾರ ನೀಡಬೇಕು. ಅದರಲ್ಲಿ 1 ಲ.ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಉಳಿದ 2 ಲ.ರೂ.ಗಳನ್ನು ಆಕೆಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮಹಿಳಾ ಠಾಣೆಯ ಪೊಲೀಸ್‌ ನಿರೀಕ್ಷಕರಾಗಿದ್ದ ಎಸ್‌.ಎಚ್‌. ಭಜಂತ್ರಿ ಮತ್ತು ರೇವತಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ಸರಕಾರದ ಪರ ವಾದಿಸಿದ್ದರು.

ಟಾಪ್ ನ್ಯೂಸ್

1-sadsad

WTC Final: ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ

ನಗರ-ಗ್ರಾಮಾಂತರ; ಕುಡಿಯುವ ನೀರಿಗೆ ಹೊಡೆತ!

ನಗರ-ಗ್ರಾಮಾಂತರ; ಕುಡಿಯುವ ನೀರಿಗೆ ಹೊಡೆತ!

1-sasadsad

Sisodia ಸ್ಥಿತಿ ನೆನೆದು ವೇದಿಕೆಯಲ್ಲೇ ಕಣ್ಣೀರಿಟ್ಟ ಕೇಜ್ರಿವಾಲ್; ವಿಡಿಯೋ

tdy-7

ದೇಗುಲದ ಮುಂದೆ ʼಆದಿಪುರುಷ್‌ʼ ನಟಿಗೆ ಮುತ್ತು ಕೊಟ್ಟ ನಿರ್ದೇಶಕ: ಬಿಜೆಪಿ ನಾಯಕ ಕೆಂಡಾಮಂಡಲ

ಚಿರು ಇಲ್ಲದ ಮೂರು ವರುಷ

ಚಿರು ಇಲ್ಲದ ಮೂರು ವರುಷ

Haveri: ಪತ್ನಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

Haveri: ಪತ್ನಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು: ಡಿ.ಕೆ.ಶಿವಕುಮಾರ್

ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು: ಡಿ.ಕೆ.ಶಿವಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kadri Park:ಕಾಯಕಲ್ಪ ನಿರೀಕ್ಷೆಯಲ್ಲಿ ಸಂಗೀತ ಕಾರಂಜಿ: ತೆರೆದಿದ್ದಕ್ಕಿಂತ ಮುಚ್ಚಿದ್ದೇ ಜಾಸ್ತಿ

Kadri: ಕಾಯಕಲ್ಪ ನಿರೀಕ್ಷೆಯಲ್ಲಿ ಸಂಗೀತ ಕಾರಂಜಿ: ತೆರೆದಿದ್ದಕ್ಕಿಂತ ಮುಚ್ಚಿದ್ದೇ ಜಾಸ್ತಿ

ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ

ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ

Mangaluru: ಪಿಲಿಕುಳದಲ್ಲಿ ಹುಲಿಗಳ ಕಾಳಗ; ಒಂದು ಹುಲಿ ಸಾವು

Mangaluru: ಪಿಲಿಕುಳದಲ್ಲಿ ಹುಲಿಗಳ ಕಾಳಗ; ಒಂದು ಹುಲಿ ಸಾವು

ಬಸ್‌ಗಳ ಮೇಲಾಟ: ವಿದ್ಯಾರ್ಥಿ ಸಾವು; ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬಸ್‌ಗಳ ಮೇಲಾಟ: ವಿದ್ಯಾರ್ಥಿ ಸಾವು; ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

sharan pumpwell

ಆ್ಯಂಟಿ ಕಮ್ಯುನಲ್ ವಿಂಗ್ ರಚನೆ: ವಿಎಚ್‌ಪಿ ಸ್ವಾಗತ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

ಜಾಹ್ನವಿ ದರ್ಬಾರ್‌: ಚೊಚ್ಚಲ ಚಿತ್ರದ ಮೇಲೆ ನವ ನಟಿಯ ನಿರೀಕ್ಷೆ

ಜಾಹ್ನವಿ ದರ್ಬಾರ್‌: ಚೊಚ್ಚಲ ಚಿತ್ರದ ಮೇಲೆ ನವ ನಟಿಯ ನಿರೀಕ್ಷೆ

1-sadsad

WTC Final: ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ

Kapu ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಬೇಕಿದೆ ಮೇಜರ್‌ ಸರ್ಜರಿ

Kapu ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಬೇಕಿದೆ ಮೇಜರ್‌ ಸರ್ಜರಿ

ಮೈಸೂರಿನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ

ಮೈಸೂರಿನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ

Udupi ನಗರದಲ್ಲಿ ನೇರಳೆ ಹಣ್ಣಿನತ್ತ ಗ್ರಾಹಕರ ಆಕರ್ಷಣೆ

Udupi ನಗರದಲ್ಲಿ ನೇರಳೆ ಹಣ್ಣಿನತ್ತ ಗ್ರಾಹಕರ ಆಕರ್ಷಣೆ