
ವಿಚಾರವಾದಿ ನರೇಂದ್ರ ನಾಯಕ್ ಗನ್‌ಮ್ಯಾನ್ ಹಿಂಪಡೆತ
Team Udayavani, Mar 31, 2023, 6:42 AM IST

ಮಂಗಳೂರು: ವಿಚಾರವಾದಿ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಪ್ರೊ| ನರೇಂದ್ರ ನಾಯಕ್ ಅವರಿಗೆ ನೀಡಿದ್ದ ಭದ್ರತೆಯನ್ನು ಪೊಲೀಸ್ ಇಲಾಖೆ ಹಿಂಪಡೆದಿದೆ.
ಮಾ.29ರ ರಾತ್ರಿಯಿಂದ ನರೇಂದ್ರ ನಾಯಕ್‌ಗೆ ನೀಡಲಾದ ಅಂಗರಕ್ಷಕರನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಗಳು, ಗೌನ್‌ಮ್ಯಾನ್ ಸೌಲಭ್ಯ ಒದಗಿಸುವ ಸಂಬಂಧ ಪ್ರತಿ ವರ್ಷ ಪರಿಶೀಲಿಸಿ ಮುಂದುವರಿಸಲಾಗುತ್ತದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು ಐವರಿಗೆ ಗನ್‌ಮ್ಯಾನ್ ಸೌಲಭ್ಯ ನೀಡಲಾಗುತ್ತಿತ್ತು. ಈಗಾಗಲೇ ಒಬ್ಬರಿಗೆ ಒದಗಿಸಲಾಗಿದ್ದ ಸೌಲಭ್ಯವನ್ನು ಹಿಂಪಡೆಯಲಾಗಿದೆ. ನಾಲ್ವರಿಗೆ ಸದ್ಯ ಗನ್‌ಮ್ಯಾನ್ ಮುಂದುವರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
