ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು; ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು
Team Udayavani, Feb 3, 2023, 6:23 PM IST
ಸಕಲೇಶಪುರ : ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡುವ ಸಿಬಂದಿಯನ್ನು ಕಿರೇಹಳ್ಳಿ ಸಮೀಪ ಓಡಿಸಿಕೊಂಡು ಹೋದ ಘಟನೆ ನಡೆದಿದೆ.
ತಾಲೂಕಿನ ಹಲಸುಲಿಗೆ ಹಾಗೂ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯ ಆರ್.ಆರ್.ಟಿ ಸಿಬಂದಿ ಕಾಡಾನೆಗಳ ಚಲನವಲನದ ಮೇಲೆ ತೀವ್ರ ನಿಗಾವಹಿಸಿದ್ದಾರೆ.
ಈ ನಡುವೆ ಇಂದು ಮಧ್ಯಾಹ್ನ ಒಂದು ಬದಿಯಿಂದ ಮತ್ತೊಂದು ಬದಿಗೆ ಕಾಡಾನೆಗಳು ದಾಟುತ್ತಿದ್ದ ವೇಳೆ ಇಟಿಎಫ್ ಸಿಬಂದಿ ಒಬ್ಬರನ್ನು ಕಾಡಾನೆಗಳು ಅಟ್ಟಿಸಿಕೊಂಡು ಘೀಳಿಡುತ್ತಾ ಹೋಗಿವೆ. ಈ ಸಂದರ್ಭದಲ್ಲಿ ಇಟಿಎಫ್ ಸಿಬಂದಿ ಮೈಕ್ ಮೂಲಕ ಓಡು ಓಡು ಎಂದು ಅನೌನ್ಸ್ ಮಾಡಿದ ವೇಳೆ ಎದ್ದುಬಿದ್ದು ಓಡಿದ ಕಾರು ಚಾಲಕ ಕೂದಲೆಲೆಯ ಅಂತರದಲ್ಲಿ ಪಾರಾಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾರೆ.
ಜೀವದ ಹಂಗು ತೊರೆದು ಇಟಿಎಫ್ ಸಿಬಂದಿ ಕಾಡಾನೆಗಳ ಚಲನವಲನ ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ