
ಉಪ್ಪಿನಂಗಡಿ: ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ
Team Udayavani, Mar 18, 2023, 6:05 AM IST

ಉಪ್ಪಿನಂಗಡಿ: ಇಲ್ಲಿನ ಬಹುಮಹಡಿ ಕಟ್ಟಡ ಪೃಥ್ವಿ ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಾ.17ರಂದು ಅಪರಾಹ್ನ ನಡೆದಿದ್ದು, ಸಕಾಲದಲ್ಲಿ ಬೆಂಕಿ ನಂದಿಸಿದ್ದರಿಂದ ಸಂಭವನೀಯ ಅನಾಹುತಗಳು ತಪ್ಪಿವೆ.
ಇಲ್ಲಿನ ಅಂಚೆಕಚೇರಿ ಬಳಿ ಇರುವ ಈ ಸಂಕೀರ್ಣದ ಪ್ರಥಮ ಮಹಡಿಯಲ್ಲಿರುವ ವಿದ್ಯುತ್ ಮೀಟರ್‌ಗಳ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಮೀಟರ್‌ಗಳು ಹೊತ್ತಿ ಉರಿಯಲಾರಂಭಿಸಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಕಾಲದಲ್ಲಿ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸರ್ಕ್ನೂಟ್ ಅವಘಡಕ್ಕೆ ಕಾರಣವೆಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
