ಸಾತ್ವಿಕ್-ಚಿರಾಗ್ ಡಬಲ್ಸ್ ಪ್ರಶಸ್ತಿ
Team Udayavani, May 1, 2023, 6:09 AM IST
ದುಬಾೖ: ಭಾರತದ ಸ್ಟಾರ್ ಡಬಲ್ಸ್ ಆಟಗಾರರಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಡಬಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ 58 ವರ್ಷಗಳ ಪ್ರಶಸ್ತಿ ಬರವನ್ನು ಅಂತ್ಯಗೊಳಿಸಿದರು. ಈ ಮೊದಲು 1965ರಲ್ಲಿ ದಿನೇಶ್ ಖನ್ನಾ ಅವರು ಈ ಚಾಂಪಿಯನ್ಶಿಪ್ನ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.
2022ರ ವಿಶ್ವ ಚಾಂಪಿಯನ್ಶಿಪ್ ಕಂಚು ವಿಜೇತರಾಗಿದ್ದ ಸಾತ್ವಿಕ್-ಚಿರಾಗ್ ಅವರು ಕಠಿನ ಫೈನಲ್ ಹೋರಾಟದಲ್ಲಿ ಮಲೇಷ್ಯಾದಾಂಗ್ ಯೂ ಸಿನ್ ಮತ್ತು ತಿಯೊ ಈ ಯಿ ಅವರನ್ನು 16-21, 21-17, 21-19 ಗೇಮ್ಗಳಿಂದ ಅಮೋಘವಾಗಿ ಸೋಲಿಸಿ ಏಷ್ಯನ್ ಚಾಂಪಿಯನ್ ಎನಿಸಿಕೊಂಡರು. ಪುರುಷರ ಡಬಲ್ಸ್ನಲ್ಲಿ ಭಾರತ ಈ ಹಿಂದೆ ಕಂಚಿನ ಪದಕ ಜಯಿಸಿದ ಸಾಧನೆ ಮಾಡಿತ್ತು. 1971ರಲ್ಲಿ ದೀಪು ಘೋಷ್ ಮತ್ತು ರಾಮನ್ ಘೋಷ್ ಅವರು ಕಂಚು ಜಯಿಸಿದ್ದರು.
ದಿನೇಶ್ ಖನ್ನಾ ಅವರು 1965ರಲ್ಲಿ ಲಕ್ನೋದಲ್ಲಿ ನಡೆದ ಏಷ್ಯನ್ ಬ್ಯಾಡ್ಮಿಂಟನ್ನ ಪುರುಷರ ಸಿಂಗಲ್ಸ ಫೈನಲ್ನಲ್ಲಿ ಥಾಯ್ಲೆಂಡ್ನ ಸಂಗೋಬ್ ರತನುಸೋರ್ನ್ ಅವರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದ್ದರು.
ಬಾಸೆಲ್ನಲ್ಲಿ ನಡೆದಿದ್ದ ಸ್ವಿಸ್ ಓಪನ್ ಸೂಪರ್ 300 ಕೂಟದ ಪ್ರಶಸ್ತಿ ಜಯಿಸಿದ್ದ ಸಾತ್ವಿಕ್-ಚಿರಾಗ್ ಅವರು ಈ ಕೂಟದಲ್ಲಿ ಅಮೋಘ ನಿರ್ವಹಣೆ ನೀಡುತ್ತ ಬಂದಿದ್ದರು. ಮೊದಲ ಗೇಮ್ನಲ್ಲಿ ಸೋತಿದ್ದರೂ ಅವರು ಮುಂದಿನ ಎರಡು ಗೇಮ್ಗಳಲ್ಲಿ ಭರ್ಜರಿಯಾಗಿ ಆಡಿ ಗೆಲುವು ಒಲಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ