
ಮೇಲ್ಮನೆ ವಿಪಕ್ಷ ಸ್ಥಾನ ತಪ್ಪಿದ್ದಕ್ಕೆ ಇಬ್ರಾಹಿಂ ಕೋಪ, ಕೈ ಗೆ ಗುಡ್ ಬೈ
ಏನೋ ಸಿದ್ದ ಎಂದರೆ ಹೌದೋ ಬುದ್ದ ಎಂಬ ಪರಿಸ್ಥಿತಿ
Team Udayavani, Jan 27, 2022, 12:35 PM IST

ಬೆಂಗಳೂರು : ” ಏನೋ ಸಿದ್ದ ಎಂದರೆ ಹೌದೋ ಬುದ್ದ” ಎಂಬ ಪರಿಸ್ಥಿತಿ ರಾಜ್ಯ ಕಾಂಗ್ರೆಸ್ ನಲ್ಲಿ ಇದೆ. ಕಾಂಗ್ರೆಸ್ ಹಾಗೂ ನನ್ನದು ಮುಗಿದ ಅಧ್ಯಾಯ. ಸದ್ಯದಲ್ಲೇ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸಿ.ಎಂ.ಇಬ್ರಾಹಿಂ ಗುಡುಗಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, AICC ತೀರ್ಮಾನ ನೋಡಿ ಮನಸ್ಸಿಗೆ ಸಂತೋಷ ಆಯ್ತು. ಹರಿಪ್ರಸಾದ್ ಹಾಗೂ ಶಿವಕುಮಾರ್ ಒಳ್ಳೆಯ ಟೀಮ್ .ವಿಚಾರಧಾರೆಗಳು ಒಂದೇ ಆದ್ದರಿಂದ ಹರಿಪ್ರಸಾದ್ ನೇಮಕ ಮಾಡಿದ್ದಾರೆ.ನನ್ನ ಹಿತೈಶಿಗಳ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನನ್ನ ಸ್ಥಿತಿ ತಬ್ಬಲಿಯೂ ನೀ ಆದೆಯ ಎಂಬಂತಾಗಿದೆ. ಸಿದ್ದರಾಮಯ್ಯ ಗಾಗಿ ದೇವೇಗೌಡರಂತ ಮಹಾನಾಯಕರನ್ನ ಬಿಟ್ಟು ಬಂದೆ. ಇವತ್ತು ಗುರುವಾರ ಉಪವಾಸ ಇದ್ದೇನೆ.ಇದಕ್ಕೆ ಉತ್ತರವನ್ನು , ಕರ್ನಾಟಕದ ರಾಜ್ಯದ ಜನ ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ಇಂದ ಸಾಕಷ್ಟು ದೂರವಾಣಿ ಕರೆ ಬರ್ತಿವೆ .ಆದಷ್ಟು ಬೇಗ ನನ್ನ ನಿರ್ಣಯ ಹೇಳ್ತೇನೆ. ಸಿದ್ದರಾಮಯ್ಯ ರನ್ನ ಬದಾಮಿಗೆ ಕರ್ಕೊಂಡು ಹೋಗಿ, ನಾಮಿನೇಷನ್ ಮಾಡಿಸಿದೆ. ಸಿದ್ದರಾಮಯ್ಯ ಗೆ ಹೊಸ ರಾಜಕೀಯ ಜೀವನ ಕೊಟ್ಟಿದ್ದಕ್ಕೆ, ಒಳ್ಳೆಯ ಉತ್ತರ ಕೊಟ್ಟಿದ್ದಾರೆ. ಇವತ್ತಿನಿಂದ ಜೋಳಿಗೆ ಧರಿಸಿ, ಜನರ ಹತ್ತಿರ ಹೋಗುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ನಾನು. ಹೇಳಿದ್ದಂತೆ ರಾಜ್ಯದಲ್ಲಿ ಆಗುತ್ತಾ ಬಂದಿದೆ. ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ ಆಡಳಿತ ರಾಜ್ತದಲ್ಲಿ ಜಾರಿಯಾಗುತ್ತದೆ ಎಂದು ಭವಿಷ್ಯ ನುಡಿದರು.
ಬೆಳೆ ಕೊಯ್ದುಕೊಂಡು ನಮ್ಮನ್ನ ಹೊರ ಹಾಕಿದ್ದಾರೆ.
3 ವರ್ಷದ ವಿಧಾನ ಪರಿಷತ್ ಸ್ಥಾನಕ್ಕೂ ಶೀಘ್ರ ರಾಜೀನಾಮೆ ನೀಡುತ್ತೇನೆ. ಅಖಿಲೇಶ್, ಮಮತಾ ಬ್ಯಾನರ್ಜಿ, ದೇವೇಗೌಡ ಸೇರಿದಂತೆ ಯಾರ ಜೊತೆ ಹೋಗಬೇಕ ಎಂಬ ಬಗ್ಗೆ ಚರ್ಚೆ ಮಾಡ್ತೇನೆ. ನನಗೆ ಸ್ಥಾನ ತಪ್ಪಿದರ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ದೆಹಲಿಯವರು ಏನ್ ಹೇಳಿದ್ರು, ಎಲ್ಲಾ ದಾಖಲೆ ಇದೆ .ಸಂಕ್ರಾಂತಿ ನಂತರ ಉತ್ತಮ ತೀರ್ಮಾನ ಕೊಟ್ಟಿದ್ದಾರೆ ಧನ್ಯವಾದಗಳು. ನನಗೆ ಸ್ವಲ್ಪ ಸಾಲ ಇದೆ. 7-8ಜನ ಮಕ್ಕಳು ಇದ್ದಾರೆ. ಸಾಲ ತೀರಿಸಿ, ವಿಮುಕ್ತನಾಗಲು ನಿರ್ಧಾರ ಮಾಡಿದ್ದೇನೆ ಎಂದರು.
ಕುಮಾರಸ್ವಾಮಿ ಇಂದು ಮುಂಜಾನೆ ಕರೆ ಮಾಡಿದ್ದರು.ಕಾಂಗ್ರೆಸ್ ನವರು ಕಾಲ್ ಮಾಡಿದ್ರು. ನಾ ಅವರ ಬಗ್ಗೆ ಹೇಳಿದ್ರೆ ತೊಂದರೆ ಆಗಲಿದೆ. ಕಾಂಗ್ರೆಸ್ ರಾಜ್ಯದಲ್ಲಿ 120 ಇಂದ 80ಕ್ಕೆ ಬಂತು .80 ರಿಂದ ಎಷ್ಟಕ್ಕೆ ಬರುತ್ತದೆ ನೋಡಿ ಬರಲಿದೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ನಾಯಕರಿಗೆ ದೇವರು ಒಳ್ಳೇದು ಮಾಡಲಿ. ಶಿವಕುಮಾರ್, ಸಿದ್ದರಾಮಯ್ಯ ತುಂಬಾ ದೊಡ್ಡ ವರು. ಏನೋ ”ಸಿದ್ದ” ಅಂದ್ರೆ…… ಹೌದೋ ಬುದ್ದ …… ಎಂಬ ಸ್ದಿತಿ ರಾಜ್ಯ ಕಾಂಗ್ರೆಸ್ ನಲ್ಲಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅದು ಕೇಶವ ಕೃಪಾ, ನಾನು ಬಸವ ಕೃಪ ಹೇಗೆ ಒಂದಾಗಲು ಸಾಧ್ಯ ? ಯಡಿಯೂರಪ್ಪ ಜೊತೆ ಒಂದಾಗುವ ವಿಚಾರಕ್ಕೆ ಕಾದು ನೋಡಿ, ಕಾಲಾಯ ತಸ್ಮೈ ನಮಃ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guarantee Scheme ಬಗ್ಗೆ ಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ; ಸಿದ್ದರಾಮಯ್ಯ

Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ

Institution Ranking: ಬೆಂಗಳೂರಿನ ಐಐಎಸ್‌ಸಿ ದ್ವಿತೀಯ

ಚರ್ಚೆಗೆ ಗ್ರಾಸವಾದ ಎಚ್.ಡಿ. ಕುಮಾರಸ್ವಾಮಿ ದಿಲ್ಲಿ ಭೇಟಿ

High Court ಮೆಟ್ಟಿಲೇರಿದ ಡಿ. ರೂಪಾ; ವಿಚಾರಣೆಯಿಂದ ಹಿಂದೆ ಸರಿದ ನ್ಯಾ| ನಾಗಪ್ರಸನ್ನ
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್ – ಸ್ವರಾ ಭಾಸ್ಕರ್ ದಂಪತಿ: Baby Bump ಫೋಟೋ ವೈರಲ್

ಮದುವೆ ಓಡಾಟದಲ್ಲಿ ಪವಿತ್ರ-ನರೇಶ್

Guarantee Scheme ಬಗ್ಗೆ ಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ; ಸಿದ್ದರಾಮಯ್ಯ