
ಪ್ರತಿಷ್ಠಿತ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಂದ್…ಅಮೆರಿಕದ 2ನೇ ಅತೀ ದೊಡ್ಡ Bank ವೈಫಲ್ಯ!
ಸ್ಟಾರ್ಟ್ ಅಪ್ ಇಂಡಸ್ಟ್ರಿ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು.
Team Udayavani, Mar 11, 2023, 12:01 PM IST

ವಾಷಿಂಗ್ಟನ್: ಅಮೆರಿಕದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ “ಸಿಲಿಕಾನ್ ವ್ಯಾಲಿ ಬ್ಯಾಂಕ್” ನ ಹೂಡಿಕೆದಾರರು ಮತ್ತು ಠೇವಣಿದಾರರು ಬರೋಬ್ಬರಿ 42 ಬಿಲಿಯನ್ ಡಾಲರ್ ನಷ್ಟು ಬೃಹತ್ ಮೊತ್ತದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ ಪರಿಣಾಮ ಬ್ಯಾಂಕ್ ನ ನಗದು ವ್ಯವಹಾರದಲ್ಲಿ ಕೊರತೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದು ಅಮೆರಿಕದ ಹಣಕಾಸು ವಹಿವಾಟಿನ 2ನೇ ಅತೀ ದೊಡ್ಡ ಬ್ಯಾಂಕ್ ವೈಫಲ್ಯವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನ ಓದಿ:ಚಾ.ನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಧ್ರುವನಾರಾಯಣ
ಬಿಕ್ಕಟ್ಟಿಗೆ ಕಾರಣವೇನು?
ಎಸ್ ವಿಬಿ ಮಾತೃ ಸಂಸ್ಥೆಯಾದ ಎಸ್ ವಿಬಿ ಫೈನಾಶ್ಶಿಯಲ್ ಗ್ರೂಪ್, ತನ್ನ ಭಾಗವಾಗಿರುವ 21 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಬಾಂಡ್ಸ್ ಮತ್ತು ಡಿಬೆಂಚರ್ಸ್ ಅನ್ನು ಮಾರಾಟ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಹೂಡಿಕೆದಾರರು ಮತ್ತು ಠೇವಣಿದಾರರಲ್ಲಿ ಆತಂಕ ಹುಟ್ಟಿಸಲು ಕಾರಣವಾಗಿತ್ತು. ಇದರ ಮುಂದುವರಿದ ಭಾಗವಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ನ ಗ್ರಾಹಕರು ಭಾರೀ ಪ್ರಮಾಣದ ಠೇವಣಿ ಹಿಂಪಡೆದಿದ್ದು, ಸ್ಟಾರ್ಟ್ ಅಪ್ ಇಂಡಸ್ಟ್ರಿ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು.
ಈ ಬೆಳವಣಿಗೆಯ ನಡುವೆಯೇ ಫೆಡರಲ್ ಡೆಪಾಸಿಟ್ ಇನ್ಸೂರೆನ್ಸ್ ಕಾರ್ಪೋರೇಶನ್ (ಎಫ್ ಡಿಐಸಿ), ಸಿಲಿಕಾನ್ ವ್ಯಾಲಿ ಬ್ಯಾಂಕ್ ನ ಆಸ್ತಿ-ಪಾಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ದಶಕಗಳಷ್ಟು ಇತಿಹಾಸ ಹೊಂದಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪ್ರಮುಖವಾಗಿ ಠೇವಣಿ ಸಂಗ್ರಹ, ಟೆಕ್ ಸಂಸ್ಥೆಗಳಿಗೆ ಸಾಲ ನೀಡುವುದು, ಆನ್ ಲೈನ್ ಬ್ಯಾಂಕಿಂಗ್, ವಿದೇಶಿ ವಿನಿಮಯ ವಹಿವಾಟು ಸೇರಿದಂತೆ ಹಲವು ಸರ್ವೀಸ್ ಗಳನ್ನು ನೀಡುತ್ತಿತ್ತು. ಜಗತ್ತಿನಾದ್ಯಂತ ಎಸ್ ವಿ ಬಿ ಗ್ರಾಹಕರನ್ನು ಹೊಂದಿತ್ತು.
ಸಿಲಿಕಾನ್ ವ್ಯಾಲಿ ಬ್ಯಾಂಕ್ ನ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಎಸ್ ವಿಬಿ ಷೇರು ಮೌಲ್ಯ ಶೇ.60ರಷ್ಟು ಕುಸಿತ ಕಂಡಿತ್ತು. ಇದರ ಪರಿಣಾಮ 80 ಬಿಲಿಯನ್ ಡಾಲರ್ ನಷ್ಟು ನಷ್ಟ ಅನುಭವಿಸಿದೆ. ಆದರೂ ಹೂಡಿಕೆದಾರರ ಹಣ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿತ್ತಾದರೂ ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಈ ನಿಟ್ಟಿನಲ್ಲಿ ಎಫ್ ಡಿಐಸಿ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚನೆ ನೀಡಿದೆ.
ಠೇವಣಿ ವಾಪಸ್ ಕೊಡುತ್ತೇವೆ:
ಮಾರ್ಚ್ 13ರಂದು ಸಿಲಿಕಾನ್ ವ್ಯಾಲಿ ಬ್ಯಾಂಕ್ ನ ಕೇಂದ್ರ ಕಚೇರಿ ಮತ್ತು ಎಲ್ಲಾ ಶಾಖೆಗಳನ್ನು ತೆರೆಯಲಿದ್ದು, ವಿಮೆ ಹೊಂದಿರುವ ಠೇವಣಿದಾರರ ಹಣ ನೀಡುವುದಾಗಿ ಎಫ್ ಡಿಐಸಿ ಭರವಸೆ ನೀಡಿದೆ. ಆದರೆ ಎಫ್ ಡಿಐಸಿ ಪ್ರಕಾರ, 2022ರ ಅಂತ್ಯದ ವೇಳೆಗೆ ಬ್ಯಾಂಕ್ ನ 175 ಶತಕೋಟಿ ಡಾಲರ್ ಠೇವಣಿಗಳಲ್ಲಿ ಶೇ.89ರಷ್ಟು ಠೇವಣಿಗಳಿಗೆ ವಿಮೆ ಮಾಡಿಲ್ಲ. ಆ ಗ್ರಾಹಕರ ಠೇವಣಿ ಭವಿಷ್ಯ ಏನು ಎಂಬುದು ಅತಂತ್ರವಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಷೇರುಪೇಟೆ ಹೂಡಿಕೆದಾರರಿಗೆ 5.50 ಲಕ್ಷ ಕೋಟಿ ರೂ. ನಷ್ಟ

United Kingdom: ಅಕ್ಟೋಬರ್ ನಿಂದ ಸ್ಟೂಡೆಂಟ್ ವೀಸಾ ಶುಲ್ಕ ಏರಿಕೆ: ಬ್ರಿಟನ್

TIMEನಿಂದ ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿ ಬಿಡುಗಡೆ…ಭಾರತದ ಒಂದೇ ಕಂಪನಿಗೆ ಸ್ಥಾನ!

Bank of Barodaದಿಂದ ಭರ್ಜರಿ ಫೆಸ್ಟಿವ್ ಆಫರ್ -‘BOB’ ಸಂಗ್ ತ್ಯೋಹಾರ್ ಕಿ ಉಮಂಗ್’

Cash On Delivery ವೇಳೆ ಈ…ದಿನಾಂಕದಿಂದ 2000 ಮುಖಬೆಲೆಯ ನೋಟನ್ನು ಸ್ವೀಕರಿಸಲ್ಲ: ಅಮೆಜಾನ್