ಸದನ ಹೆಚ್ಚು ಕಾಲ ನಡೆಯಲು ಕಾಲ ಕೂಡಿಬರಬೇಕು: ಸ್ಪೀಕರ್ ಕಾಗೇರಿ

Team Udayavani, Dec 24, 2021, 3:58 PM IST

assembly

ಸುವರ್ಣ ಸೌಧ : ಸದನ ಹೆಚ್ಚು ಕಾಲ ನಡೆಯಬೇಕು ಎಂಬುದು ಎಲ್ಲರ ಅಪೇಕ್ಷೆ,ಆದರೆ ಅದಕ್ಕೆ ತಕ್ಕುದಾದ ಕಾಲ ಕೂಡಿಬರಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ಯಶಸ್ವಿ ಅಧಿವೇಶನ ನಡೆದಿದೆ,ಈ ವರ್ಷ ಒಟ್ಟು 40 ದಿನ ಅಧಿವೇಶನ ಮಡಿಸಿದಂತೆ ಆಗಿದೆ.
ಸದನದಲ್ಲಿ 150 ಸ್ಟಾರ್ಡ್ ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ. ಸದನವನ್ನು ಚೆನ್ನಾಗಿ ನಡೆಸುವ ಉದ್ದೇಶದಿಂದ ಭಾಗವಹಿಸಿದ್ದಾರೆ. ಸದನವನ್ನು ಹೆಚ್ಚು ಕಾಲ ನಡೆಸಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ ಎಂದರು.

ಈ ಸದನದಲ್ಲಿ ಕೇವಲ 8 ಸದಸ್ಯರು ಮಾತ್ರ ಬಂದಿಲ್ಲ. ಅವರು ನನ್ನ ಅನುಮತಿ ಪಡಿದಿದ್ದರು. ಒಟ್ಟು ಹಾಜರಾತಿ 73% ಇತ್ತು. ಸದಸ್ಯರ ಉತ್ಸಾಹ ಈ ಅಂಕಿ ಅಂಶ ತೋರಿಸುತ್ತದೆ. 5,000 ಜನ ಪ್ರೇಕ್ಷಕರ ಗ್ಯಾಲರಿಯಲ್ಲಿ ಬಂದು ಕುಳಿತಿದ್ದಾರೆ. ಈ ಅಧಿವೇಶನದ ಕಲಾಪ ಚೆನ್ನಾಗಿ ನಡೆದಿದೆ ಎಂದರು.

ಸ್ಪೀಕರ್ ಆಗಿ ನನಗೆ ಬೆಳಗಾವಿ ಅಧಿವೇಶನ ನನ್ನ ಮೊದಲ ಅಧಿವೇಶನ.‌ ವ್ಯವಸ್ಥಿತವಾಗಿ ಅಧಿವೇಶನ ನಡೆಸಿದ್ದಾರೆ. ಆಹಾರ ವ್ಯವಸ್ಥೆಯೂ ಚೆನ್ನಾಗಿತ್ತು. ಯಶಸ್ಸಿಗೆ ಬೆಳಗಾವಿ ಜನರ ಪಾತ್ರ ದೊಡ್ಡದು ಅವರು ಸಹಕಾರ ನೀಡಿದ್ದಾರೆ. ಇಲ್ಲಿನ ಅಪೇಕ್ಷೆಗಳು ಸರ್ಕಾರಕ್ಕೆ ಗೊತ್ತಿದೆ ಎಂದರು.

ಸದನ 52 ಗಂಟೆ ಕಾಲ ನಡೆದಿದೆ. ಹೆಚ್ಚು ಸಮಯ ಕಲಾಪ ನಡೆದಾಗ ಸದಸ್ಯರಿಗೆ ಹೆಚ್ಚು ಕಾಲ ಮಾತನಾಡಲು ಆಗುತ್ತದೆ.
ಶಾಸಕರ ಭವನ ಆಗಬೇಕು ಎಂಬ ಅಪೇಕ್ಷೆ ಇದೆ. ಅದರ ಅಗತ್ಯವೂ ಇದೆ. ಬಿಎಸಿಯಲ್ಲೂ ಇದು ಚರ್ಚೆ ಆಗಿದೆ. ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಲುವ ಭರವಸೆ ನೀಡಿದ್ದಾರೆ ಎಂದರು.

ಕದ್ದುಮುಚ್ಚಿ ಮಸೂದೆ ಮಂಡನೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಸೂದೆ ಮಂಡನೆಯಾಗುವ ಮುಂಚಿನ‌ ದಿನ ನಾನು ಕಾರ್ಯಕಲಾಪದ ನಿರ್ಣಯ ಮಾಡುತ್ತೇನೆ. ನಾನು ಅಜೆಂಡಾ ಸಿದ್ದಪಡಿಸುವಾಗ ಆ ಬಿಲ್ ಕಾಪಿ ಬಂದಿರಲಿಲ್ಲ. ಹೀಗಾಗಿ ನಾನು ಅಜೆಂಡಾದಲ್ಲಿ ಅದನ್ನು ಹಾಕಲಿಲ್ಲ. ಊಹೆ ಮೇರೆಗೆ ಅದನ್ನು ಹಾಕಲು ಸಾಧ್ಯವಿಲ್ಲ. ಮರುದಿನ ಬಿಲ್ ಕಾಪಿ ಬಂದಿದೆ. ಆ ಮೇಲೆ ಪೂರಕ ಅಜೆಂಡಾ ಹಾಕಿದ್ದೇನೆ. ಅದಕ್ಕೆ ನಿಯಮಾವಳಿಯಲ್ಲಿ ಅವಕಾಶ ಇದೆ. ಸದನದಲ್ಲಿ ಕೋರಂ ಆದ ಬಳಿಕ ಸದನದಲ್ಲಿ ಬಿಲ್ ಮಂಡಿಸುವ ಪ್ರಕ್ರಿಯೆ ಮಾಡಿದ್ದೇನೆ. ಆದರೂ ಈ ಆರೋಪ ಬಗ್ಗೆ ಏನು ಹೇಳ ಬೇಕು ಎಂದು ಅರ್ಥ ಆಗುತ್ತಿಲ್ಲ. ಅಂದು ಮಧ್ಯಾಹ್ನ ಊಟಕ್ಕೆ ಮುಂದೂಡುವ ಮುನ್ನ ವಿಪ್ ನ ಕರೆಸಿ ಮಧ್ಯಾಹ್ನ ಮಸೂದೆ ಮಂಡಿಸುತ್ತೇನೆ ಎಂದು ಹೇಳಿದ್ದೆ. ಅಂದು ಪ್ರತಿಪಕ್ಷ ನಾಯಕರು ಸದನದ ಒಳಗೆ ಬರಲು ತಡ ಮಾಡಿದರು. ಆದರೂ ಈ ರೀತಿ ಆರೋಪ ಮಾಡಿದರೆ ಯಾರು ಪ್ರಬುದ್ಧರು ಎಂದು ಪ್ರಶ್ನೆ ಮಾಡಬೇಕು. ಸದನದಲ್ಲಿ ನಿಯಮಾವಳಿ ಪ್ರಕಾರ ಎಲ್ಲವೂ ಪ್ರಕ್ರಿಯೆ ಆಗಿದೆ ಎಂದರು.

ಸಮಯದ ಇತಿಮಿತಿಯಲ್ಲಿ ಎಲ್ಲವೂ ಆಗಬೇಕು. ಹೆಚ್ಚಿನ ಕಲಾಪ ನಡೆದಿದ್ದರೆ ಚರ್ಚೆ ಆಗುತ್ತಿತ್ತು. ಸಮಯ ಹೆಚ್ಚು ಕೊಡಬೇಕಾಗಿತ್ತು.
ಸಿದ್ದರಾಮಯ್ಯಗೆ ಚರ್ಚೆಗೆ ಒಂದು ತಾಸು ಕೊಟ್ಟಿದ್ದೇನೆ. ಅತಿವೃಷ್ಟಿ ಬಗ್ಗೆ ಅವರಿಗೆ ಹೆಚ್ಚು ಅವಕಾಶ ಕೊಟ್ಟಿದ್ದೇನೆ. ಸಮಯ ಇದ್ದಿದ್ದರೆ ಇನ್ನೂ ಸಮಯಾವಕಾಶ ಕೊಡುತ್ತಿದ್ದೆ. ಯಡಿಯೂರಪ್ಪ ಅವರು ಹೇಳಿದ ಮಾತನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಅವರ ಸಲಹೆ ಸೂಚನೆಗಳನ್ನು ಜಾರಿಗೊಳಿಸಲು ಯತ್ನಿಸುತ್ತೇನೆ ಎಂದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.