ಕಾಶ್ಮೀರ ಕುರಿತ ಹೇಳಿಕೆ; ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ವಿವೇಕ್ ಅಗ್ನಿಹೋತ್ರಿ
Team Udayavani, Jan 29, 2023, 5:41 PM IST
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಿದ ಭಾಷಣವೊಂದಕ್ಕೆ ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿದಂತೆ ವಿವಿಧ ವ್ಯಕ್ತಿಗಳು ತೀವ್ರ ವಾಗ್ದಾಳಿ ನಡೆಸಿದ್ದು, ಅಗ್ನಿಹೋತ್ರಿ ಅವರು ಭಾಷೆಯನ್ನು ಪ್ರಶ್ನಿಸಿದರೆ, ಲೇಖಕ ಅಭಿಜಿತ್ ಅಯ್ಯರ್-ಮಿತ್ರಾ ಅವರು ರಾಹುಲ್ ಗಾಂಧಿ ಅವರು ಅನ್ಯದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಡಿಯೋದಲ್ಲಿ ರಾಹುಲ್ ಗಾಂಧಿ,”ಹಿಂದೆ, ಜಮ್ಮುವಿನ ಜನರು ವ್ಯಾಪಾರ ಮಾಡುತ್ತಿದ್ದರು, ಜಮ್ಮು ಮತ್ತು ಕಾಶ್ಮೀರವನ್ನು ಇಲ್ಲಿನ ಜನರು ನಡೆಸುತ್ತಿದ್ದರು, ಇಂದು ಹೊರಗಿನವರು ಜಮ್ಮು ಮತ್ತು ಕಾಶ್ಮೀರವನ್ನು ನಡೆಸುತ್ತಿದ್ದಾರೆ. ನಮ್ಮ ಧ್ವನಿಗಳಿಗೆ ಮತ್ತು ನಮ್ಮ ಹಕ್ಕುಗಳನ್ನು ಆಡಳಿತ ಕೇಳುತ್ತಿಲ್ಲ. ಎಲ್ಲಾ ವ್ಯಾಪಾರವನ್ನು ಹೊರಗಿನವರು ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರನ್ನು ಮೂಕ ಪ್ರೇಕ್ಷಕರಾಗಿ ಬಿಟ್ಟಿದ್ದಾರೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರವು ಭಾರತದಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ಹೊಂದಿದೆ ಎಂದಿದ್ದರು.
ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಅಗ್ನಿಹೋತ್ರಿ, “ರಾಹುಲ್ ಗಾಂಧಿ ಪ್ರಕಾರ, ಭಾರತದ ಯಾವುದೇ ಭಾಗದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಬರುವ ಯಾರಾದರೂ ಹೊರಗಿನವರು. ‘ಬಾಹರ್ ಕೆ ಲೋಗ್’ ಎಂದು ಅವರು ನಿಖರವಾಗಿ ನಮ್ಮೆಲ್ಲರನ್ನೂ ಕರೆಯುತ್ತಾರೆ. ಅವರು ಯಾರ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ”ಎಂದು ಪ್ರಶ್ನಿಸಿದ್ದಾರೆ.
ಮಿತ್ರಾ ಅವರು ಟ್ವೀಟ್‌ನಲ್ಲಿ, “ವಲಸಿಗ ಕಾರ್ಮಿಕರ ಅಲೆಯ ನಂತರ, ದ್ವೇಷಪೂರಿತ ರಾಹುಲ್ ಗಾಂಧಿ ತಮ್ಮ ಜೀವನೋಪಾಯಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಬರುವವರ ವಿರುದ್ಧ ಅನ್ಯದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಇನ್ನು ಮುಂದೆ ಯಾವುದೇ ವಲಸೆ ಕಾರ್ಮಿಕರ ಹತ್ಯೆಯಾದರೆ, ಅವರ ರಕ್ತವು ರಾಹುಲ್ ಕೈಯಲ್ಲಿ ಇರುತ್ತದೆ.ಎಂದು ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ
ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…
ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು
MUST WATCH
ಹೊಸ ಸೇರ್ಪಡೆ