ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 715 ಅಂಕ ಇಳಿಕೆ; ಭಾರೀ ನಷ್ಟ ಕಂಡ ಎಸ್ ಬಿಐ ಷೇರು
ಎನ್ ಎಸ್ ಇ ನಿಫ್ಟಿ 220.60 ಅಂಕ ಇಳಿಕೆಯಾಗಿದ್ದು, 17,172 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
Team Udayavani, Apr 22, 2022, 4:49 PM IST
ಮುಂಬಯಿ: ಅಮೆರಿಕದ ಫೆಡರಲ್ ಅಧ್ಯಕ್ಷ ಜೆರೋಮ್ ಪೋವೆಲ್ ಅವರು ಶುಕ್ರವಾರ (ಏಪ್ರಿಲ್ 22) ಹಣಕಾಸು ನೀತಿಯನ್ನು ಕಠಿಣಗೊಳಿಸುವ ಮುನ್ಸೂಚನೆ ನೀಡುವ ಹೇಳಿಕೆ ನೀಡಿದ ಪರಿಣಾಮ ಜಾಗತಿಕ ಷೇರುಮಾರುಕಟ್ಟೆಯಲ್ಲಿ ನೀರಸ ವಹಿವಾಟು ಕಂಡು ಬಂದಿದ್ದು, ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಕೂಡಾ 714.53 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 714.53 ಅಂಕ ಕುಸಿತಗೊಂಡಿದ್ದು, 57,197.15 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 220.60 ಅಂಕ ಇಳಿಕೆಯಾಗಿದ್ದು, 17,172 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಮಹೀಂದ್ರ ಆ್ಯಂಡ್ ಮಹೀಂದ್ರ, ಭಾರ್ತಿ ಏರ್ ಟೆಲ್, ಮಾರುತಿ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಇಂಡಸ್ ಇಂಡ್ ಬ್ಯಾಂಕ್, ಎಸ್ ಬಿಐ, ಎಚ್ ಯುಎಲ್ ಷೇರು ನಷ್ಟ ಕಂಡಿದೆ.
ನಿಫ್ಟಿ 50ಯ ಅದಾನಿ ಪೋರ್ಟ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಎಚ್ ಸಿಎಲ್ ಟೆಕ್ ಮತ್ತು ಐಟಿಸಿ ಷೇರುಗಳು ಹೆಚ್ಚಿನ ಲಾಭಗಳಿಸಿದ್ದು, ಹಿಂಡಲ್ಕೋ, ಎಸ್ ಬಿಐ, ಎಚ್ ಯುಎಲ್ ಷೇರು ಮೌಲ್ಯ ಇಳಿಕೆಯಾಗಿದೆ.