
ಕಾಶ್ಮೀರದಲ್ಲಿರುವ ಮುಸ್ಲಿಮರ ಪರ ಧ್ವನಿ ಎತ್ತುವ ಎಲ್ಲಾ ಹಕ್ಕು ನಮಗಿದೆ: ತಾಲಿಬಾನ್
ದೇಶದ ಕಾನೂನು ಪ್ರಕಾರ ಅವರು ಕೂಡಾ ಸಮಾನ ಹಕ್ಕನ್ನು ಪಡೆಯಲು ಅರ್ಹರಾಗಿದ್ದಾರೆ
Team Udayavani, Sep 3, 2021, 12:55 PM IST

ಕಾಬೂಲ್:ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನವನ್ನು ಭಾರತ ವಿರೋಧಿ ಚಟುವಟಿಕೆಗೆ ಬಳಸಿಕೊಳ್ಳಬಹುದು ಎಂಬ ಭಾರತದ ಊಹೆಯ ನಡುವೆಯೇ ಇದೀಗ, ಕಾಶ್ಮೀರ ಸೇರಿದಂತೆ ಜಗತ್ತಿನಾದ್ಯಂತ ಇರುವ ಮುಸ್ಲಿಮರ ಬಗ್ಗೆ ಧ್ವನಿ ಎತ್ತುವ ಹಕ್ಕು ತಮಗೆ ಇದೆ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಹೇಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಖಂಡ ಭಾರತದಲ್ಲಿ ಲಾಹೋರ್,ಕರಾಚಿ ಇದ್ದಿದ್ದವೆಂದು ಪಾಕಿಸ್ತಾನ ನೆನಪಿಟ್ಟುಕೊಳ್ಳಲಿ: ಇಂದ್ರೇಶ್
ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರವನ್ನು ಬಳಸುವ ನೀತಿಯನ್ನು ತಾಲಿಬಾನ್ ಹೊಂದಿಲ್ಲ ಎಂದು ಶಾಹೀನ್ ಬಿಬಿಸಿ ಉರ್ದುಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ. ನಾವು ಮುಸ್ಲಿಮರಾಗಿದ್ದು, ನಮಗೆ ಆ ಹಕ್ಕಿದೆ ಎಂದಿರುವ ಸುಹೈಲ್, ಕಾಶ್ಮೀರದಲ್ಲಿರುವ ಮುಸ್ಲಿಮರು ಸೇರಿದಂತೆ ಇತರ ದೇಶದಲ್ಲಿರುವ ಮುಸ್ಲಿಮರ ಬಗ್ಗೆಯೂ ನಾವು ಧ್ವನಿ ಎತ್ತುತ್ತೇವೆ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಮುಸ್ಲಿಮರಿಗಾಗಿ ನಾವು ನಮ್ಮ ಧ್ವನಿ ಎತ್ತುತ್ತೇವೆ, ಯಾಕೆಂದರೆ ಮುಸ್ಲಿಮರು ನಿಮ್ಮ ದೇಶದ ಪ್ರಜೆಗಳೇ ಆಗಿದ್ದಾರೆ. ನಿಮ್ಮ ದೇಶದ ಕಾನೂನು ಪ್ರಕಾರ ಅವರು ಕೂಡಾ ಸಮಾನ ಹಕ್ಕನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ನಂತರ, ಕಾಶ್ಮೀರ ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ವಿಚಾರವಾಗಿದೆ ಎಂದು ತಿಳಿಸಿತ್ತು. ಆದರೆ ಸುಹೈಲ್ ಶಾಹೀನ್ ನೀಡಿರುವ ಹೇಳಿಕೆ ಈ ಮೊದಲು ತಾಲಿಬಾನ್ ಪ್ರತಿಕ್ರಿಯೆಗಿಂತ ವ್ಯತಿರಿಕ್ತವಾಗಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nikki Haley: ಅಮೆರಿಕದ ಮೇಲೆ ಯುದ್ಧ ಸಾರಲು ಚೀನಾ ಸಿದ್ಧತೆ ನಡೆಸುತ್ತಿದೆ: ನಿಕ್ಕಿ ಹ್ಯಾಲೆ

UNGA; “ಜಮ್ಮು ಕಾಶ್ಮೀರ ನಮ್ಮದೇ..”: ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಭಾರತದ ಖಡಕ್ ಉತ್ತರ

ಖಲಿಸ್ತಾನಿ ಹತ್ಯೆಯ ಗುಪ್ತಚರ ಮಾಹಿತಿಯನ್ನು ವಾರದ ಹಿಂದೆ ಭಾರತಕ್ಕೆ ನೀಡಲಾಗಿತ್ತು: ಟ್ರೂಡೊ

Pakistan: 2024ರ ಜನವರಿಗೆ ಪಾಕ್ ಚುನಾವಣೆ

Canada: ಖಲಿಸ್ಥಾನ ಪುಂಡಾಟಕ್ಕೆ ಟ್ರಾಡೊ ಬೆಂಬಲ- ಭಾರತದ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ
MUST WATCH
ಹೊಸ ಸೇರ್ಪಡೆ

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ