
ತಲೆಮರೆಸಿದ್ದ ಆರೋಪಿ ಸೆರೆ
Team Udayavani, Mar 31, 2023, 5:16 AM IST

ಕುಂಬಳೆ: ಕಾಪ್ಪ ಪ್ರಕರಣದ ಆರೋಪಿಯನ್ನು ಗಡೀಪಾರು ಮಾಡಿಯೂ ಊರಲ್ಲಿ ಅಡಗುದಾಣದಲ್ಲಿ ಅವಿತಿದ್ದ ಆರೋಪಿಯನ್ನು ಸೆರೆ ಹಿಡಿದು ಪೊಲೀಸರು ಜೈಲಿನಲ್ಲಿ ಬಂಧನದಲ್ಲಿರಿಸಿದ್ದ ಆರೋಪಿಯಿಂದ ಮೊಬೈಲ್ ಫೋನನ್ನು ಪತ್ತೆ ಹಚ್ಚಲಾಗಿದೆ.ಚೆಮ್ಮಟ್ಟ ಬಯಲು ಜಿಲ್ಲಾ ಜೈಲಿನಲ್ಲಿ ಕಾಪ್ಪ ಪ್ರಕರಣದಲ್ಲಿ ಬಂಧನದಲ್ಲಿದ್ದ ತ್ರಿಕ್ಕರಪ್ಪುರದ ಮಹ್ಮದ್ ಸುಹೈಲಿ (24)ಎಂಬಾತನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ವರ್ಗಾಯಿಸಲು ಪೊಲೀಸ್ ಬೆಂಗಾವಲಲ್ಲಿ ಕರೆದೊಯ್ಯುತ್ತಿದ್ದಾಗ ಈತ ತನ್ನ ಕೈ ಕಾಲಿಗೆ ಗಾಯಮಾಡಿದ್ದನು.
ಈತನನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗೆ ದಾಖಲಿಸಿ ಬಳಿಕ ಈತನನ್ನು ಪೊಲೀಸರು ಜೈಲಿಗೆ ಕರೆತರುವಾಗ ಈತ ಮೊಬೈಲನ್ನು ಬೂಟಿನ ಅಡಿಭಾಗದಲ್ಲಿ ರಿಸಿ ಜೈಲಿನೊಳಗೆ ತಂದಿದ್ದನು.ಇದನ್ನು ಗಮನಿಸಿದ ಜೈಲಿನ ಅಧೀಕ್ಷರು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಇದರಂತೆ ಪೊಲೀಸರು ಆಗಮಿಸಿ ತನಿಖೆ ನಡೆಸಿದಾಗ ಈತ ಮೊಬೈಲನ್ನು ತನ್ನ ಗುದದ್ವಾರದಲ್ಲಿ ಬಚ್ಚಿಟ್ಟಿದ್ದನು.ತಪಾಸಣೆ ನಡೆಸಲು ಒಪ್ಪದಾಗ ಪೊಲೀಸರು ಬಲವಂತವಾಗಿ ತಪಾಸಣೆ ನಡೆಸಿ ಮೊಬೈಲನ್ನು ವಶಪಡಿಸಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಮಳೆ: ನೇಕಾರರಿಗೆ ತೀವ್ರ ಹಾನಿ

ಚಿಕ್ಕಮಗಳೂರು: ನ್ಯಾಯಕ್ಕಾಗಿ 4 ವರ್ಷದ ಮಗು ಜತೆ ರಾತ್ರಿ 1ಗಂಟೆವರೆಗೂ ಠಾಣೆಯಲ್ಲಿ ಕೂತ ಮಹಿಳೆ!

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ