
ಸಾಹೇಬ್ರು ಹೋದ ಮೇಲೆ ಬಂತು ಬ್ಯಾನರ್!
ನೀತಿ ಸಂಹಿತೆ ಜಾರಿ ಹಿನ್ನಲೆ ತರಾತುರಿಯ ಉದ್ಘಾಟನೆ
Team Udayavani, Mar 29, 2023, 3:51 PM IST

ಶಿರಸಿ: ಬುಧವಾರ ಶಾಸಕ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ 10ಕ್ಕೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು, ಸೌಲಭ್ಯ ವಿತರಣೆ ಕಾರ್ಯಕ್ರಮಗಳನ್ನು ಜೋಡಿಸಲಾಗಿತ್ತು. ನೀತಿ ಸಂಹಿತೆ ಜಾರಿಗೂ ಮುನ್ನ ಎಲ್ಲ ಕಾರ್ಯಕ್ರಮ ಮುಗಿಸುವ ತರಾತುರಿಯಲ್ಲಿ ಕಾಗೇರಿ ಇದ್ದರು. ಸಂಜೆ 5ಕ್ಕೆ ನಿಗದಿಯಾಗಿದ್ದ ಮರಾಠಿಕೊಪ್ಪ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಸೋಂದಾ ತೆರಳುವುದನ್ನು ಜೋಡಿಸಿಕೊಂಡರು. ಆದರೆ, ಸ್ಥಳದಲ್ಲಿ ಯಾವ ಸಿದ್ಧತೆ ಇರಲಿಲ್ಲ. ಮುಜುಗರಕ್ಕೆ ಒಳಗಾದರೂ ತೋರಿಸಿಕೊಳ್ಳದ ಕಾಗೇರಿ ಅವರು ತೆರಳಿದ ಮೇಲೆ ಬ್ಯಾನರ್ ಜೊತೆ ನಗರಸಭೆ ಸಿಬ್ಬಂದಿಗಳು ಬಂದರು. ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರಿಗಳ ಫೋಟೊ ಸೆಶನ್ ನಡೆಯಿತು. ಅಲ್ಲಿ ಕಾಗೇರಿ ಅವರು ಇರಲಿಲ್ಲ,ಅವರ ಭಾವ ಚಿತ್ರವಿತ್ತು!
ಈ ವೇಳೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ ಇತರರು ಘಟನೆಗೆ ಸಮಜಾಯಿಸಿ ನೀಡಲು ಯತ್ನಿಸಿದರು. ಉದ್ಘಾಟನೆ ಮಾಡಿ ಬಿಡೋಣ ಎಂದವರಿಗೆ ಸಿದ್ಧತೆ ಮಾಡಲಾಗದೇ ಮುಜುಗರವಾದರೆ, ಗೌರವಾನ್ವಿತ ಸ್ಪೀಕರ್ ಹುದ್ದೆಯಲ್ಲಿದ್ದವರಿಗೆ ದಾರಿ ತಪ್ಪಿಸಿದವರು ಯಾರೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಯಿತು!
ಇದನ್ನೂ ಓದಿ: ಕೋಲಾರ: ಸಿದ್ದು ಸ್ಪರ್ಧೆ ಘೋಷಣೆಗೆ ಏ.5ರ ಗಡುವು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
