
ತಂದೆ ಮನೆಗೆಂದು ಹೋದ ವ್ಯಕ್ತಿ ನಾಪತ್ತೆ
Team Udayavani, Apr 1, 2023, 5:27 AM IST

ಕಾರ್ಕಳ: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ನಿವಾಸಿ ಉದಯ ಕುಮಾರ್ (38) ಎಂಬವರು ನಾಪತ್ತೆಯಾದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಲ್ಲಿದ್ದ ತಮ್ಮ ತಂದೆಯವರ ಆರೈಕೆಗೆಂದು ತಂದೆಯ ಮನೆಯಾದ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿಗೆ ಹೋಗಿದ್ದರು. ಅಲ್ಲಿದ್ದ ವೇಳೆ ಅವರು ಪ್ರತಿ ದಿನ ತಾವು ವಾಸವಿದ್ದ ಜಾರಿಗೆಕಟ್ಟೆ ಮನೆಗೆ ಕರೆ ಮಾಡಿ ಮಾತನಾಡುತ್ತಿದ್ದರು. ಕಳೆದ 8 ದಿನಗಳಿಂದ ಪೋನ್ ಕರೆಯನ್ನು ಸ್ವೀಕರಿಸದೆ ಇದ್ದುದನ್ನು ಕಂಡು ಮನೆಯವರು ಬೇಲಾಡಿಗೆ ಹೋಗಿ ಮನೆಯವರಲ್ಲಿ ವಿಚಾರಿಸಿದಾಗ ಉದಯ ಕುಮಾರ್ ಮಾ. 25ರಂದು ಮಧ್ಯಾಹ್ನ 2ಕ್ಕೆ ಕಾರ್ಕಳಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದಾರೆ ಎಂದಿದ್ದು ಅತ್ತ ತಂದೆ ಮನೆಗೆ ವಾಪಸ್ಸಾಗದೆ, ಇತ್ತ ವಾಸವಿದ್ದ ಮನೆಗೂ ಬಾರದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
