ವಿಮಾನದ ತುರ್ತುದ್ವಾರ ತೆರೆದ ಪ್ರಯಾಣಿಕ!
-9 ಮಂದಿ ಆಸ್ಪತ್ರೆಗೆ ದಾಖಲು, ತಪ್ಪಿದ ಭಾರೀ ಅನಾಹುತ
Team Udayavani, May 27, 2023, 7:05 AM IST
ಸಿಯೋಲ್: ದಕ್ಷಿಣ ಕೊರಿಯಾದ ಡಾಯೆಗು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ವಿಮಾನವೊಂದರ ಪ್ರಯಾಣಿಕ ಲ್ಯಾಂಡಿಂಗ್ಗೆ ಮುಂಚೆಯೇ ತುರ್ತುದ್ವಾರ ತೆರೆದಿದ್ದಾರೆ. ಇದರಿಂದ ಉಳಿದ ಪ್ರಯಾಣಿಕರು ಉಸಿರಾಟ ಸಮಸ್ಯೆಗೆ ಸಿಲುಕಿ 9 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಏಷಿಯಾನಾ ಏರ್ಲೈನ್ಸ್ನ ವಿಮಾನವೊಂದು 200 ಪ್ರಯಾಣಿಕರನ್ನು ಹೊತ್ತು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿತ್ತು. ಲ್ಯಾಂಡಿಂಗ್ಗೆ ಇನ್ನೂ 200 ಮೀಟರ್ (650 ಅಡಿ) ಎತ್ತರವಿರುವಾಗಲೇ ಪ್ರಯಾಣಿಕರೊಬ್ಬರು ತುರ್ತು ದ್ವಾರ ತೆರೆದಿದ್ದಾರೆ. ಇದರಿಂದ ಗಾಳಿ ವಿಮಾನದ ಒಳನುಗ್ಗಿದ್ದು, ಅದರ ರಭಸಕ್ಕೆ 9 ಪ್ರಯಾಣಿಕರಿಗೆ ಉಸಿರಾಟದ ಸಮಸ್ಯೆಯಾಗಿದೆ.
ಆದಾಗ್ಯೂ, ಯಾವುದೇ ಅಪಾಯವಿಲ್ಲದಂತೆ ವಿಮಾನ ಲ್ಯಾಂಡ್ ಆಗಿದ್ದು, ಕೂಡಲೇ ಸಮಸ್ಯೆಯಾದ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತುರ್ತುದ್ವಾರ ತೆರೆದ ವ್ಯಕ್ತಿಯನ್ನು ಬಂಧಿಸಲಾಗಿದೆ. ದ್ವಾರ ತೆರೆದಿದ್ದಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ