
Wind: ಗಾಳಿಯ ರಭಸಕ್ಕೆ ಕಿತ್ತುಹೋದ ಬಸ್ ಛಾವಣಿ !
Team Udayavani, Jun 1, 2023, 7:55 AM IST

ಚೆನ್ನೈ: ಬಿರುಗಾಳಿಯ ರಭಸಕ್ಕೆ ಸರ್ಕಾರಿ ಬಸ್‌ವೊಂದರ ಮೇಲ್ಛಾವಣಿಯೇ ಹಾರಿಹೋಗಿದ್ದು, ಪ್ರಯಾಣಿಕರು ಗಾಬರಿಗೊಂಡಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಪಜವೆರ್ಕಾಡು ಪ್ರದೇಶದಿಂದ ಸೆಂಗುಂದ್ರಂಗೆ ಮಂಗಳವಾರ ತೆರಳುತ್ತಿದ್ದ 559ಬಿ ಸರ್ಕಾರಿ ಬಸ್‌ಗೆ ಇದಕ್ಕಿದ್ದಂತೆ ಬಿರುಗಾಳಿ ಎದುರಾಗಿದೆ. ಈ ವೇಳೆ ಗಾಳಿಯ ರಭಸಕ್ಕೆ ಬಸ್‌ನ ಮೇಲ್ಛಾವಣಿ ಕಿತ್ತುಹೋಗಿದೆ. ತಕ್ಷಣವೇ ರಸ್ತೆ ಪಕ್ಕದಲ್ಲಿ ಬಸ್ ನಿಲ್ಲಿಸಲಾಗಿದ್ದು, ಗಾಬರಿಗೊಂಡ ಜನರು ಬಸ್‌ನಿಂದ ಕೆಳಗಿಳಿದಿದ್ದಾರೆ. ಮೇಲ್ಛಾವಣಿ ಹಾರಿ, ಬಸ್‌ನ ಪಕ್ಕದಲ್ಲಿ ನೇತಾಡುತ್ತಿದ್ದುದ್ದನ್ನು ಹಲವರು ವಿಡಿಯೊ ಮಾಡಿಕೊಂಡಿದ್ದು, ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿದೆ. ಅಲ್ಲದೇ ರಾಜ್ಯ ಸಾರಿಗೆ ಸಂಸ್ಥೆ ಸಾರ್ವಕಜನಿಕ ಬಸ್‌ಗಳನ್ನು ನಿರ್ವಹಿಸುತ್ತಿರುವ ಕಳಪೆ ರೀತಿಯ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pakistan: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 34 ಮಂದಿ ಮೃತ್ಯು, 100ಕ್ಕೂ ಹೆಚ್ಚು ಗಾಯ

Pakistani Tv Show: ಟಿವಿ ಚಾನೆಲ್ ನ ಲೈವ್ ಶೋನಲ್ಲೇ ಪಾಕ್ ಮುಖಂಡರ ಮಾರಾಮಾರಿ!

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

UK ವಿಶ್ವದಲ್ಲೇ ಬಲಿಷ್ಠ ಲೇಸರ್ ನಿರ್ಮಾಣ? ಸೂರ್ಯನಿಗಿಂತಲೂ ಶತಕೋಟಿ ಪಟ್ಟು ಪ್ರಕಾಶಮಾನ

London ಹ್ಯಾರಿಪಾಟರ್ ನಟ ಮೈಕೆಲ್ ಗ್ಯಾಂಬೊನ್ ನಿಧನ
MUST WATCH
ಹೊಸ ಸೇರ್ಪಡೆ

Theft: ಶೂ ಬಾಕ್‌ನಲ್ಲಿದ್ದ ಮನೆ ಕೀ ಕದ್ದು ಆಭರಣ ದೋಚಿದ್ದ ಮಹಿಳೆ ಸೆರೆ

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ

Crime: ವ್ಯಕ್ತಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳ ಬಂಧನ

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ

Crime: ಹಣಕಾಸಿನ ವಿಚಾರಕ್ಕೆ ಸಹೋದ್ಯೋಗಿ ಕೊಲೆ ಮಾಡಿದ್ದ ಆರೋಪಿ ಬಂಧನ