ಕಳ್ಳ ಸಹೋದರರ ಸೆರೆ: ಐದು ಬೈಕ್ ಜಪ್ತಿ
Team Udayavani, Jan 20, 2022, 12:24 PM IST
ಕಲಬುರಗಿ: ನಗರದಲ್ಲಿ ಹಾಡು ಹಗಲೇ ಬೈಕ್‌ಗಳ ಕಳ್ಳತನದಲ್ಲಿ ತೊಡಗಿಸಿ ಕೊಂಡಿದ್ದ ಇಬ್ಬರು ಸಹೋದರರನ್ನು ಉತ್ತರ ಉಪವಿಭಾಗದ ಚೌಕ್ ಠಾಣೆ ಪೊಲೀಸರು ಬಂಧಿಸಿ, 3.5 ಲಕ್ಷ ರೂ. ಮೌಲ್ಯದ ಐದು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಕಾಳಗಿ ತಾಲೂಕಿನ ಕೊರವಾರ ಗ್ರಾಮದ ವಿಕಾಸ ಹೊಸಮನಿ, ರಾಮಚಂದ್ರ ಹೊಸಮನಿ ಬಂಧಿತ ಸಹೋದರರು.
ಬುಧವಾರ ಬೆಳಗ್ಗೆ ತಾಜ್‌ಸುಲ್ತಾಪುರ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಈ ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಎಪಿಎಂಸಿ, ವೆಂಕಟೇಶ್ವರ ಶೋ ರೂಂ ಸೇರಿದಂತೆ ಹಲವು ಕಡೆಗಳಲ್ಲಿ ಬೈಕ್‌ಗಳ ಕಳ್ಳತನ ಮಾಡಿರುವುದಾಗಿ ಆರೋಪಿತರು ಬಾಯ್ಬಿಟ್ಟಿದ್ದಾರೆ.
ಬಂಧಿತರಿಂದ ಐದು ಹಿರೋ ಹೊಂಡಾ ಸ್ಪೆಂಡ್ಲರ್ ಬೈಕ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.