
ಹೀಗೂ ಉಂಟು: ಸಿಎಂ ಪಟ್ಟ ಪಡೆದ ಕರಾವಳಿಯ ಇಬ್ಬರೂ ನ್ಯಾಯವಾದಿಗಳು !
Team Udayavani, Mar 31, 2023, 8:10 AM IST

ಮಂಗಳೂರು: ಕರ್ನಾಟಕ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹಿನ್ನೆಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಿದೆ. ರಾಜಕೀಯ ರಂಗದಲ್ಲಿ ಅನೇಕ ಘಟಾನು ಘಟಿಗಳು ದ.ಕ.- ಉಡುಪಿಯಲ್ಲಿದ್ದರೂ ಮುಖ್ಯಮಂತ್ರಿ ಸ್ಥಾನ ಲಭಿಸಿದ್ದು ಕಡಿಮೆ. ಕಾರ್ಕಳ ಶಾಸಕರಾಗಿದ್ದ ಮೂಡುಬಿದಿರೆ (ಮಾರ್ಪಾಡಿ) ವೀರಪ್ಪ ಮೊಯ್ಲಿಯವರು ಕಾಂಗ್ರೆಸ್‌ನಿಂದ 1992ರ ನ. 19ರಂದು ರಾಜ್ಯದ 20ನೇ ಮುಖ್ಯಮಂತ್ರಿಯಾದರು. 1994ರ ಡಿ. 11ರವರೆಗೆ ಅಧಿಕಾರದಲ್ಲಿದ್ದರು. ದೇವರಗುಂಡ ವೆಂಕಪ್ಪ (ಡಿ.ವಿ.) ಸದಾನಂದ ಗೌಡ ಅವರು ಬಿಜೆಪಿಯಿಂದ ರಾಜ್ಯದ 29ನೇ ಮುಖ್ಯಮಂತ್ರಿಯಾಗಿ 2011ರ ಆ. 4ರಿಂದ 2012ರ ಜು. 11ರ ವರೆಗೆ ಅಧಿಕಾರದಲ್ಲಿದ್ದರು. ಇಬ್ಬರ ಅವಧಿಯಲ್ಲೂ ಸಂಪುಟಗಳಲ್ಲಿ ಜಿಲ್ಲೆಗೆ ಗಮನಾರ್ಹ ಪ್ರಾತಿನಿಧ್ಯ ನೀಡಲಾಗಿತ್ತು.
ಮೊಯ್ಲಿ ಮತ್ತು ಡಿ.ವಿ. ಇಬ್ಬರೂ ಪರಿಣತ ನ್ಯಾಯವಾದಿಗಳು. ಇಬ್ಬರೂ ರೈತರ ಪರ ಸೇವಾಕಾರ್ಯದಿಂದ ರಾಜಕೀಯ ಕ್ಷೇತ್ರದಲ್ಲಿ ಮಿಂಚಿದವರು. ಉತ್ತಮ ವಾಗ್ಮಿಗಳು. ಆದರೆ ಅವರಿಗೆ ಪೂರ್ಣ ಐದು ವರ್ಷದ ಅಧಿಕಾರ ದೊರೆಯಲಿಲ್ಲ. ಮೊಯ್ಲಿ ಅವರಿಗೆ ಚುನಾವಣಾಪೂರ್ವ ಎರಡು ವರ್ಷ, ಡಿ.ವಿ.ಗೆ ಮಧ್ಯಂತರ ಸುಮಾರು ಒಂದು ವರ್ಷವಷ್ಟೇ ದೊರೆಯಿತು. ವಿಶೇಷವೆಂದರೆ, ಬಳಿಕ ಅವರಿಬ್ಬರೂ ಸಂಸದರಾದರು. ಮೊಯ್ಲಿ ಮಾಜಿ ಕೇಂದ್ರ ಸಚಿವರು, ಡಿವಿ ಮಾಜಿ ಸಚಿವರು ಹಾಗೂ ಹಾಲಿ ಸಂಸದರು!
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?