
Nuclear plant: ವಿಶ್ವದ ಬೃಹತ್ ಪರಮಾಣು ಸ್ಥಾವರಕ್ಕೆ ಸಂಕಷ್ಟ !
ಉದ್ಯೋಗಿ ಮಾಡಿದ ಎಡವಟ್ಟಿನಿಂದ ಸಂಸ್ಥೆಗೆ ತಲೆಬಿಸಿ
Team Udayavani, May 26, 2023, 7:55 AM IST

ಟೋಕ್ಯೋ: ಸುರಕ್ಷತಾ ಮಾನದಂಡಗಳನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ, ವಿಶ್ವದ ಬೃಹತ್ ಪರಮಾಣು ಸ್ಥಾವರ ಟೋಕ್ಯೋ ಎಲೆಕ್ಟ್ರಿಕ್ ಪವರ್ ಕಂಪನಿ (ಟೆಪ್ಕೋ) ಕಾರ್ಯಾಚರಣೆಗೆ ಇತ್ತೀಚೆಗೆ ತಡೆ ನೀಡಲಾಗಿತ್ತು. ಇದೀಗ ಅದೇ ಸಂಸ್ಥೆಯ ಉದ್ಯೋಗಿಯೊಬ್ಬರ ನಿರ್ಲಕ್ಷ್ಯದಿಂದ ಕಂಪನಿಯ ಅಗತ್ಯ ದಾಖಲೆಗಳು ಕಳೆದುಹೋಗಿದ್ದು, ಇದರಿಂದ ಸಂಸ್ಥೆ ಮತ್ತಷ್ಟು ಕಾಲ ನಿರ್ಬಂಧ ಎದುರಿಸುವಂತಾಗಿದೆ. 2011ರ ಫುಕುಶಿಮಾ ದುರಂತದ ಬಳಿಕ ಜಪಾನ್ ಪರಮಾಣು ನಿಯಂತ್ರಣ ಪ್ರಾಧಿಕಾರವು ರಾಷ್ಟ್ರದ ಕೆಲವೇ ಕೆಲವು ಪರಮಾಣು ಸ್ಥಾವರಗಳಿಗೆ ಮಾತ್ರ ಕಾರ್ಯಾಚರಣೆ ಅನುಮತಿ ನೀಡಿದೆ.
33 ಸ್ಥಾವರ ಕಾರ್ಯಾಚರಣೆ ಮರು ಆರಂಭಗೊಳಿಸಲು ಅನುಮತಿಗಾಗಿ ಕಾಯುತ್ತಿದ್ದು, ಈ ಪೈಕಿ ಟೆಪ್ಕೋ ಕೂಡ ಸೇರಿದೆ. ಆದರೆ, ಸುರಕ್ಷತೆ ವಿಚಾರದಲ್ಲಿ ಅಗತ್ಯ ಮಾನದಂಡ ಪೂರೈಸದ ಹಿನ್ನೆಲೆ ಕಳೆದವಾರವಷ್ಟೇ ಪ್ರಾಧಿಕಾರ, ಟೆಪ್ಕೋ ಕಾರ್ಯಾಚರಣೆಗೆ ತಡೆ ನೀಡಿತ್ತು. ಬಳಿಕ ಮಾನದಂಡಗಳನ್ನು ಪೂರೈಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಇರುವಂಥ ದಾಖಲೆಗಳನ್ನು ಪ್ರಸ್ತುತಪಡಿಸಲು ಸಂಸ್ಥೆ ಯೋಜಿಸಿದ್ದು, ಕಂಪನಿಯ ಉದ್ಯೋಗಿಯೊಬ್ಬರಿಗೆ ದಾಖಲೆಗಳನ್ನು ತರುವಂತೆ ಸೂಚಿಸಿದೆ. ಆದರೆ, ಉದ್ಯೋಗಿ ದಾಖಲೆಗಳನ್ನು ತನ್ನ ಕಾರಿನ ಮೇಲೆ ಇಟ್ಟು ಮರೆತು ಕಾರು ಚಲಾಯಿಸಿದ್ದು, ದಾಖಲೆಗಳು ಎಲ್ಲೋ ಬಿದ್ದುಹೋಗಿವೆ. ಈಗ ದಾಖಲೆಗಳ ಕೆಲವೇ ಪುಟಗಳು ಸಿಕ್ಕಿದ್ದು, ಇನ್ನೂ 38 ಪುಟಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಒಟ್ಟಾರೆ ಉದ್ಯೋಗಿಯ ಎಡವಟ್ಟು ಸಂಸ್ಥೆಯ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
