
ಅನಧಿಕೃತ ಚಿಲ್ಲರೆ ಮೀನು ಮಾರಾಟ: ಅಪರ ನಿರ್ದೇಶಕರ ಎಚ್ಚರಿಕೆ
Team Udayavani, Oct 1, 2021, 7:17 PM IST

ಮಂಗಳೂರು: ಉಡುಪಿ ಜಿಲ್ಲೆಯ ಮೀನುಗಾರಿಕಾ ಅಪರ ನಿರ್ದೇಶಕ ಡಿ. ತಿಪ್ಪೆಸ್ವಾಮಿ ಅವರು ಶುಕ್ರವಾರ ಮಂಗಳೂರಿನ ಮೀನುಗಾರಿಕಾ ಬಂದರಿಗೆ ಅನಿರೀಕ್ಷಿತ ಭೇಟಿ ನೀಡಿ ಅನಧಿಕೃತ ಚಿಲ್ಲರೆ ಮೀನು ಮಾರಾಟ ಚಟುವಟಿಕೆಯನ್ನು ಕೂಡಲೇ ತೆರವುಗೊಳಿಸುವಂತೆ ಚಿಲ್ಲರೆ ಮೀನು ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.
ಬಂದರಿನಲ್ಲಿ ಇದೇ ರೀತಿಯಲ್ಲಿ ಚಿಲ್ಲರೆ ಮೀನು ಮಾರಾಟ ಕ್ರಮ ಮುಂದುವರೆಸಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದೆಂದು ಸ್ಥಳದಲ್ಲಿ ಮೀನು ವ್ಯಾಪಾರಸ್ಥರಿಗೆ ಸೂಚಿಸಿದರು.
ಸ್ಥಳೀಯ ಮೀನುಗಾರಿಕೆ ಇಲಾಖಾ ಅಧಿಕಾರಿಗಳು ಹಾಗೂ ಮಂಗಳೂರು ಮೀನುಗಾರಿಕೆ ಬಂದರಿನ ಸಮಗ್ರ ನಿರ್ವಹಣೆಯ ಗುತ್ತಿಗೆದಾರರು ಈ ಸಂದರ್ಭ ಜೊತೆಯಲ್ಲಿಲ್ಲಿದ್ದರು.
ಟಾಪ್ ನ್ಯೂಸ್
