‘ಹೋಮ್ ಮಿನಿಸ್ಟರ್’ ಆಗಿ ಉಪ್ಪಿ ಏಪ್ರಿಲ್ 1 ರಿಂದ ಚಿತ್ರಮಂದಿರಗಳಲ್ಲಿ!
Team Udayavani, Mar 6, 2022, 12:48 PM IST
ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಅವರು ‘ಹೋಮ್ ಮಿನಿಸ್ಟರ್’ ಆಗಿ ಏಪ್ರಿಲ್ 1 ರಿಂದ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಅವರು ಅಭಿನಯಿಸಿರುವ ಬಹು ನೀರಿಕ್ಷಿತ ‘ಹೋಮ್ ಮಿನಿಸ್ಟರ್’ ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.
‘ಹೋಮ್ ಮಿನಿಸ್ಟರ್’ ಒಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶ್ರೀ ಹರಿ ನಾನು ನಿರ್ದೇಶಿಸಿದ್ದಾರೆ. ಪೂರ್ಣಾ ನಾಯ್ಡು ನಿರ್ಮಿಸಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ವೇದಿಕಾ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಸಾಧು ಕೋಕಿಲಾ, ಅವಿನಾಶ್ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಜಿಬ್ರಾನ್ ಅವರು ಸಂಗೀತ ಸಂಯೋಜಿಸಿದ್ದಾರೆ.
ಸದಾ ಕುತೂಹಲ ಕಾರಿ ಘಟನೆಗಳ ಭಿನ್ನ, ವಿಭಿನ್ನ, ಚಿತ್ರ ವಿಚಿತ್ರ ಚಿತ್ರಗಳೊಂದಿಗೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ಉಪ್ಪಿ ‘ಹೋಮ್ ಮಿನಿಸ್ಟರ್’ ಆಗಿ ಏನೇನು ಮಾಡಿದ್ದಾರೆ, ಕಾನೂನು ಸುವ್ಯವಸ್ಥೆ ಸರಿ ಮಾಡಲು ಏನು ಸಂದೇಶ ನೀಡಿದ್ದಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.