ವಿಜಯಪುರ: ತಪ್ಪು ಔಷಧಿ ಸಿಂಪಡಣೆಗೆ ಹಾಳಾದ ದ್ರಾಕ್ಷಿ; ರೈತ ಆತ್ಮಹತ್ಯೆ
Team Udayavani, Feb 5, 2023, 10:57 PM IST
ವಿಜಯಪುರ : ಕೊಯ್ಲಿನ ಹಂತದಲ್ಲಿದ್ದ ದ್ರಾಕ್ಷಿ ಬೆಳೆ ರೋಗ ನಿಯಂತ್ರಣಕ್ಕೆ ತಪ್ಪಾದ ಔಷಧಿ ಸಿಂಪರಣೆ ಮಾಡಿದ ರೈತರೊಬ್ಬರು ಬೆಳೆಹಾನಿ ಅನುಭವಿಸಿದ್ದು, ಆರ್ಥಿಕ ನಷ್ಟದ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಆತಂಕಕ್ಕೊಳಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ನಿವಾಸಿ ಮನೋಹರ ಆಯತವಾಡ (55) ಎಂದು ಗುರುತಿಸಲಾಗಿದೆ.
ತನ್ನ ತೋಟದಲ್ಲಿ ಕೊಯ್ಲಿಗೆ ಬಂದಿದ್ದ ದ್ರಾಕ್ಷಿ ಬೆಳೆ ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಣೆ ಮಾಡಿದ್ದರು. ಆದರೆ ತಾವು ಸಿಂಪಡಿಸಿದ್ದು ತಪ್ಪಾದ ಔಷಧಿ ಎಂಬ ಅರಿವಾಗುವ ಹಂತದಲ್ಲಿ ಇಡೀ ದ್ರಾಕ್ಷಿ ಬೆಳೇ ಹಾಗೂ ಬಳಿ ಒಣಗಿ ನಿಂತಿತ್ತು. ಇದರಿಂದ ಆರ್ಥಿಕ ಉನ್ನತೀಕರಣದ ನಿರೀಕ್ಷೆಯಲ್ಲಿದ್ದ ರೈತ ಮನೋಹರ ಏಕಾಏಕಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂಧ ಆತಂಕಕ್ಕೊಳಗಾಗಿದ್ದರು.
ಕುಟುಂಬದ ಮೂಲಗಳ ಪ್ರಕಾರ ರೈತ ಮನೋಹರ ದ್ರಾಕ್ಷಿ ಬೆಳೆ ಸಂರಕ್ಷಣೆಗಾಗಿ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ ಕೈಗೆ ಬಂದ ಬೆಳೆ ಹಾಳಾದ ಕಾರಣ ಮಾನಸಿಕವಾಗಿ ಕುಗ್ಗಿಹೋಗಿದ್ದ ಮನೋಹರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ
ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ
ಯುಗಾದಿ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಂ.ಬಿ.ಪಾಟೀಲ
ಮೇಲ್ಮನೆ ವಿಪಕ್ಷದ ಸಚೇತಕ ರಾಠೋಡಗೆ ಮಾತೃವಿಯೋಗ
ಅಕಾಲಿಕ ಮಳೆಗೆ ಕೊಳೆಯುತ್ತಿದೆ ದ್ರಾಕ್ಷಿ ಬೆಳೆ; ವಿಜಯಪುರ ಜಿಲ್ಲೆ ಅನ್ನದಾತರು ಕಂಗಾಲು
MUST WATCH
ಹೊಸ ಸೇರ್ಪಡೆ
ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ
ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…
ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ
ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಹತ್ವದ ಒಪ್ಪಂದ
ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!