ಈ ಹಾಡನ್ನು ನೀವೂ ಕೇಳಿ… ವಿಕ್ರಾಂತ್ ರೋಣ ಸಿನಿಮಾದ ಎರಡನೇ ಲಿರಿಕಲ್ ಹಾಡು ಬಿಡುಗಡೆ
3ನಿಮಿಷ 34 ಸೆಕೆಂಡುಗಳ ಹಾಡಿನ ವಿಡಿಯೋ ಕಿಚ್ಚನ ಅಭಿಮಾನಿಗಳ ಮನಗೆದ್ದಿದೆ.
Team Udayavani, Jul 2, 2022, 5:48 PM IST
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಲುಲ್ಲಾಭಾಯ್ -ರಾಜಕುಮಾರಿ ಹಾಡು ಶನಿವಾರ (ಜುಲೈ 02) ಲಹರಿ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದ್ದು, ಕೇವಲ ಒಂದು ಗಂಟೆಯೊಳಗೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವ ಮೂಲಕ ಟ್ರೆಂಡಿಂಗ್ ಆಗಿದೆ.
ಇದನ್ನೂ ಓದಿ:ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ; ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ
ವಿಕ್ರಾಂತ್ ರೋಣ ಸಿನಿಮಾದ ಮಲಯಾಳಂ ಹಾಡು ಜುಲೈ 3ರಂದು, ತೆಲುಗು ಜು.4ಕ್ಕೆ, ಹಿಂದಿ ಜು.5ಕ್ಕೆ ಹಾಗೂ ಜು.6ಕ್ಕೆ ತಮಿಳು ವರ್ಶನ್ ಹಾಡು ಬಿಡುಗಡೆಯಾಗಲಿದೆ. 3ನಿಮಿಷ 34 ಸೆಕೆಂಡುಗಳ ಹಾಡಿನ ವಿಡಿಯೋ ಕಿಚ್ಚನ ಅಭಿಮಾನಿಗಳ ಮನಗೆದ್ದಿದೆ.
ಈ ಸಿನಿಮಾದ ರಾ..ರಾ ರಕ್ಕಮ್ಮ ಹಾಡು ಈಗಾಗಲೇ ಕೋಟ್ಯಂತರ ಜನರ ಮನಗೆದ್ದಿದೆ. ಕಳೆದ ಕೆಲವು ದಿನಗಳಿಂದ ರಾ..ರಾ…ರಕ್ಕಮ್ಮ ಹಾಡು ಟ್ರೆಂಡಿಂಗ್ ನಲ್ಲಿದ್ದು, ಇದೀಗ ವಿಕ್ರಾಂತ್ ರೋಣ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದ್ದು, ಸಿನಿ ಪ್ರಿಯರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.