Bangladesh:ಹಸೀನಾ ದೇಶ ತೊರೆದ ಬೆನ್ನಲ್ಲೇ ಜೈಲಿನಿಂದ ಮಾಜಿ ಪ್ರಧಾನಿ ಜಿಯಾ ಬಿಡುಗಡೆಗೆ ಆದೇಶ!

ಖಲೀದಾ ಜಿಯಾ ಅವರು ಅವಿಭಜಿತ ಭಾರತದ ಪಶ್ಚಿಮಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ್ದರು.

Team Udayavani, Aug 6, 2024, 1:21 PM IST

Bangladesh:ಹಸೀನಾ ದೇಶ ತೊರೆದ ಬೆನ್ನಲ್ಲೇ ಜೈಲಿನಿಂದ ಮಾಜಿ ಪ್ರಧಾನಿ ಜಿಯಾ ಬಿಡುಗಡೆಗೆ ಆದೇಶ!

ಢಾಕಾ: ಹಿಂಸಾಚಾರದಿಂದ ಬಾಂಗ್ಲಾದೇಶ ನಲುಗಿ ಹೋಗಿದ್ದು, ಶೇಖ್‌ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ ಶೇಖ್‌ ಹಸೀನಾ ಅವರ ರಾಜಕೀಯ ಬದ್ಧ ವೈರಿ ಎಂದೇ ಗುರುತಿಸಲ್ಪಟ್ಟ ಖಲೀದಾ ಜಿಯಾ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ನೀಡಿರುವ ಬೆಳವಣಿಗೆ ಸೋಮವಾರ (ಆಗಸ್ಟ್‌ 05) ನಡೆದಿದೆ.

ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಬಾಂಗ್ಲಾದೇಶದಲ್ಲಿ ಪತನಗೊಂಡ ಬೆನ್ನಲ್ಲೇ ದೇಶದ ರಾಜಕೀಯದಲ್ಲಿ ಭಾರೀ ಬದಲಾವಣೆಯ ಮುನ್ಸೂಚನೆ ಲಭಿಸತೊಡಗಿದ್ದು, ಅವಾಮಿ ಲೀಗ್‌ ನಾಯಕಿ, ಜೈಲಿನಿಂದ ಬಿಡುಗಡೆಗೊಳ್ಳಲಿರುವ ಖಲೀದಾ ಜಿಯಾ ಮತ್ತೆ ಅಧಿಕಾರದ ಗದ್ದುಗೆ ಏರುವ ಸಿದ್ಧತೆಯಲ್ಲಿರುವುದಾಗಿ ವರದಿ ವಿವರಿಸಿದೆ.

ಜೈಲಿನಲ್ಲಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಜೈಲಿನಿಂದ ಬಿಡುಗಡೆಯಾಗುವ ಸಿದ್ಧತೆಯಲ್ಲಿದ್ದಾರೆ. ಪದಚ್ಯುತ ಶೇಖ್‌ ಹಸೀನಾ ಬಾಂಗ್ಲಾದೇಶ ತೊರೆದ ಬೆನ್ನಲ್ಲೇ ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ಧೀನ್‌ ಜಿಯಾ ಬಿಡುಗಡೆಗೆ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.

ಖಲೀದಾ ಜಿಯಾ ಅವರು ಅವಿಭಜಿತ ಭಾರತದ ಪಶ್ಚಿಮಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ್ದರು. ಆಕೆಯ ಪತಿ ಲೆಫ್ಟಿನೆಂಟ್‌ ಜನರಲ್‌ ಜಿಯಾವುರ್‌ ರೆಹಮಾನ್‌ ಒಬ್ಬ ನಿರ್ದಯಿ ಮಿಲಿಟರಿ ಅಧಿಕಾರಿಯಾಗಿದ್ದ. 1977ರಿಂದ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದು, 1981ರಲ್ಲಿ ಹತ್ಯೆಗೈಯಲಾಗಿತ್ತು.

ಬಾಂಗ್ಲಾದೇಶದಲ್ಲಿ ಭೀಕರ ಹಿಂಸಾಚಾರ ನಡೆಯುತ್ತಿದ್ದ ಸಂದರ್ಭದಲ್ಲೇ ಖಲೀದಾ ಜಿಯಾ 1991ರಲ್ಲಿ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. ಬಹುಮತ ಕೊರತೆಯಿಂದಾಗಿ ಜಿಯಾ ಜಾಮಾ ಇ ಇಸ್ಲಾಮಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು.

1996ರಲ್ಲಿ ಖಲೀದಾ ಜಿಯಾ ಎರಡನೆ ಬಾರಿ ಗೆಲುವು ಸಾಧಿಸಿದ್ದರು ಕೂಡಾ, ಅವಾಮಿ ಲೀಗ್‌ ಸೇರಿದಂತೆ ಪ್ರಮುಖ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ನಂತರ ಕೇವಲ 12 ದಿನಗಳಲ್ಲಿ ಜಿಯಾ ಸರ್ಕಾರ ಪತನಗೊಂಡಿತ್ತು. ಬಳಿಕ ಜೂನ್‌ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್‌ ಜಯಭೇರಿ ಬಾರಿಸುವ ಮೂಲಕ ಶೇಖ್‌ ಹಸೀನಾ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರದ ಗದ್ದುಗೆ ಏರಿದ್ದರು.

ಟಾಪ್ ನ್ಯೂಸ್

Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ

Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

ja

BBK11: ಪ್ರತಿದಿನ ಎಂಜಾಯ್ ಮಾಡುತ್ತಿದ್ದೇನೆ.. ಬಿಗ್ ಬಾಸ್ ಬಿಟ್ಟು ಹೋಗಲ್ಲ ಎಂದ ಜಗದೀಶ್

gan-police

Gangavathi: ಬೈಕ್ ವೀಲ್ಹಿಂಗ್ ಮಾಡಬೇಡಿ ಎಂದಿದ್ದಕ್ಕೆ ಪೊಲೀಸರಿಗೇ ಥಳಿಸಿದ ಪುಂಡರ ಗುಂಪು!

Rishab

National Award: ದೈವ, ದೈವ ನರ್ತಕರು, ಜನರಿಗೆ ರಾಷ್ಟ್ರಪ್ರಶಸ್ತಿ ಅರ್ಪಣೆ: ರಿಷಬ್‌ ಶೆಟ್ಟಿ

ಅಡಕೆ ವ್ಯಾಪಾರಿಯನ್ನ ಬೆದರಿಸಿ 17 ಲಕ್ಷ ದರೋಡೆ… ಘಟನೆ ನಡೆದ ಎರಡೇ ದಿನಕ್ಕೆ ಆರೋಪಿಗಳ ಬಂಧನ

ಅಡಕೆ ವ್ಯಾಪಾರಿಯನ್ನ ಬೆದರಿಸಿ 17 ಲಕ್ಷ ದರೋಡೆ… ಘಟನೆ ನಡೆದ ಎರಡೇ ದಿನಕ್ಕೆ ಆರೋಪಿಗಳ ಬಂಧನ

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isrel netanyahu

Hezbollah ದುರ್ಬಲ; ನಸ್ರಲ್ಲಾ ಉತ್ತರಾಧಿಕಾರಿಗಳೆಲ್ಲ ಫಿನಿಷ್: ನೆತನ್ಯಾಹು ಹೇಳಿಕೆ

Godfather of Artificial Intelligence and the Nobel Prize in Physics for tw

Nobel: ಕೃತಕ ಬುದ್ಧಿಮತ್ತೆ ಗಾಡ್‌ಫಾದರ್‌ ಸೇರಿ ಇಬ್ಬರಿಗೆ ಭೌತಶಾಸ್ತ್ರದ ನೋಬೆಲ್‌ ಪ್ರಶಸ್ತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Israel-Hamas War:ಹಮಾಸ್‌ ದಾಳಿಗೆ 1 ವರ್ಷ-ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ದಾಳಿ, ಪ್ರತಿದಾಳಿ

Israel-Hamas War:ಹಮಾಸ್‌ ದಾಳಿಗೆ 1 ವರ್ಷ-ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ದಾಳಿ, ಪ್ರತಿದಾಳಿ

Karachi Airport: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

Explosion: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ

Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

ja

BBK11: ಪ್ರತಿದಿನ ಎಂಜಾಯ್ ಮಾಡುತ್ತಿದ್ದೇನೆ.. ಬಿಗ್ ಬಾಸ್ ಬಿಟ್ಟು ಹೋಗಲ್ಲ ಎಂದ ಜಗದೀಶ್

ACT

Mangaluru: ಆಲ್ವಿನ್‌ ಡಿ’ಸೋಜ ಮೇಲೆ ಹಲ್ಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

gan-police

Gangavathi: ಬೈಕ್ ವೀಲ್ಹಿಂಗ್ ಮಾಡಬೇಡಿ ಎಂದಿದ್ದಕ್ಕೆ ಪೊಲೀಸರಿಗೇ ಥಳಿಸಿದ ಪುಂಡರ ಗುಂಪು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.