ಸರ್ವಶಕ್ತೆಯಾದ ಹೆಣ್ಣಿಗೆ ಅಶಕ್ತೆಯ ಭಾವ ಏಕೆ?


Team Udayavani, Mar 11, 2021, 6:20 AM IST

ಸರ್ವಶಕ್ತೆಯಾದ ಹೆಣ್ಣಿಗೆ ಅಶಕ್ತೆಯ ಭಾವ ಏಕೆ?

ಮಹಿಳೆ, ಹೆಣ್ಣು, ಸ್ತ್ರೀ.. ಈ ಪದಗಳ ಅರ್ಥ ಬಹಳ ವಿಶಾಲವಾದದ್ದು ಮಾತ್ರವಲ್ಲದೆ ಅಷ್ಟೇ ಅಪ್ಯಾಯ ಮಾನವಾದದ್ದು. ಹೆಣ್ಣು ಒಂದು ಪೂರ್ಣ ವೃತ್ತವಿದ್ದಂತೆ. ಆ ಪೂರ್ಣ ವೃತ್ತದೊಳಗೆ ಏನೆಲ್ಲ ಇರಬೇಕು ಅವೆಲ್ಲ ಅಂತರ್ಗತವಾಗಿರುತ್ತದೆ. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಈ ಮಾತಿನಲ್ಲಿ ಹೆಣ್ಣು ಎಂಬ ಪದಕ್ಕೆ ವಿಶಾಲವಾದ ವ್ಯಾಖ್ಯಾನ ಸಿಗುತ್ತದೆ. ಹೆಣ್ಣು ಎಲ್ಲವನ್ನು ಸಮದೂಗಿಸುವ ಜಾಣೆ, ತ್ಯಾಗಮಯಿ.

ಅಪ್ಪ ಅಂದರೆ ಆಕಾಶ ಏನೋ ನಿಜ, ಆದರೆ ಅಮ್ಮ ಅಂದರೆ ಈ ಭೂಮಿ. ಇವಳಲ್ಲಿ ಸ್ವೀಕಾರವೂ ಇದೆ, ಸವಾಲೂ ಇದೆ. ಇಷ್ಟೆಲ್ಲ ಇದ್ದರೂ ಹೆಣ್ಣು ಅಸಹಾಯಕಿ, ಅಶಕ್ತೆ ಎಂದು ಬಿಂಬಿಸುವ ಎಷ್ಟೋ ಘಟನೆಗಳು ಇಂದಿಗೂ ನಡೆಯುತ್ತಿವೆ. ಎಷ್ಟೇ ಕ್ರಿಯಾಶೀಲೆಯಾಗಿರೂ ಎಲ್ಲ ಕ್ಷೇತ್ರಗಳಲ್ಲೂ ತನ್ನ ಬಾಹುಗಳನ್ನು ಚಾಚಿದ್ದರೂ ಸಶಕ್ತೀಕರಣ ಅನ್ನುವುದು ಮಹಿಳೆಯರ ಮಟ್ಟಿಗೆ ಆಧುನಿಕ ಜಗತ್ತಿನ ಅತೀ ಆವಶ್ಯಕತೆಗಳಲ್ಲಿ ಒಂದು. ಒಂದಲ್ಲ ಒಂದು ಕಾರಣ ಗಳಿಂದ ಒಳಗೊಳಗೆ ಬೆಂದು ಬಸವಳಿಯುವ ಕಣ್ಣು ಈ ಹೆಣ್ಣು ಎಂದರೆ ತಪ್ಪಾಗಲಾರದು. ಯಂಡಮೂರಿ ವೀರೇಂದ್ರನಾಥ್‌ ಹೇಳಿದಂತೆ ಬದುಕಿನಲ್ಲಿ ಎದುರಾಗುವ ಹೊಸ ಅನುಭವಗಳನ್ನು ಸ್ವೀಕರಿಸುತ್ತಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಟುಸತ್ಯವನ್ನು ಜೀರ್ಣಿಸಿಕೊಳ್ಳುತ್ತ ಮುಂದೆ ಸಾಗುವ ವ್ಯಕ್ತಿತ್ವವೇ ಮಾನಸಿಕ ಬೆಳವಣಿಗೆ ಅಥವಾ ಮನೋವಿಕಾಸ. ಪ್ರತೀ ಮಹಿಳೆಯಲ್ಲೂ ಈ ರೀತಿಯ ಮಾನಸಿಕ ಬೆಳವಣಿಗೆಯಾದಲ್ಲಿ ಮಹಿಳೆಯ ಸಶಕ್ತೀಕರಣ ಸಾಧ್ಯ. ಮಹಿಳೆ ತನ್ನನ್ನು ತಾನು ಶಕ್ತಿ ಎಂದು ಒಪ್ಪಿಕೊಳ್ಳುವುದು, ತನ್ನ ಸಂಪನ್ಮೂಲಗಳ ಮೇಲೆ ನಿಯಂತ್ರಣ, ಆತ್ಮವಿಶ್ವಾಸ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ದಿಟ್ಟತನದಿಂದ ಬಂದು ದೆಲ್ಲವನ್ನು ಎದುರಿಸುವುದು.. ಇವೆಲ್ಲವೂ ಮಹಿಳಾ ಸಶಕ್ತೀಕರಣದ ಪ್ರಮುಖ ಅಂಶಗಳು.

ಮಹಿಳೆ ಮನೆಗಷ್ಟೇ ಸೀಮಿತವಲ್ಲ, ಮನೆಯಿಂದಾಚೆ ಸಪ್ತಸಾಗರದಾಚೆಗೆ ದಾಟಿ, ಬಾಹ್ಯಾಕಾಶದಲ್ಲಿ ಕೂಡ ಪಯಣಿಸಿ, ಇಂದಿನ ಆಧುನಿಕ ಯುಗದ ಮಹಿಳೆ ಯರ ಸ್ಥಾನಮಾನಗಳನ್ನು ಹೆಚ್ಚಿಸಿದ್ದಾರೆ. ಗುರುತರ ಜವಾಬ್ದಾರಿ ನಿಭಾಯಿಸಿ, ಪುರುಷ ಸಮಾನವಾದ ಕರ್ತವ್ಯ ಬದ್ಧತೆ ಮೆರೆದಿದ್ದಾರೆ.

ಭಾರತೀಯ ಸಂವಿಧಾನವು ಅನುಚ್ಛೇದ 14 ಮತ್ತು 39ರ ಅಡಿಯಲ್ಲಿ ಮಹಿಳೆಯರಿಗೆ ಲಿಂಗ ತಾರತಮ್ಯ ರಹಿತ ಸಮಾನ ಅವಕಾಶ ಕಲ್ಪಿಸಿದೆ. ನಗರ ಪ್ರದೇಶಗಳಿಂದ ಹಿಡಿದು ಹಳ್ಳಿಹಳ್ಳಿಗಳಲ್ಲೂ ಹುಟ್ಟಿಕೊಂಡ ಸ್ತ್ರೀಶಕ್ತಿ ಸಂಘಗಳು ಮಹಿಳೆಯರು ಹೊರ ಪ್ರಪಂಚದ ಜ್ಞಾನವನ್ನು ಪಡೆದು ಸ್ವಾವಲಂಬಿಗಳಾಗಲು ನೆರವಾಗಿದೆ. ಸ್ವಯಂ ವಿಶ್ವಾಸ, ಧೈರ್ಯ, ಸ್ವಾವ ಲಂಬನೆಯ ಬದುಕಿಗೆ ಹೆಣ್ಣನ್ನು ತೆರೆದಿಟ್ಟಿದೆ. ಆಧುನಿಕ ಜಗದಲ್ಲಿ ಪ್ರತೀ ಮನೆಯ ಹೆಣ್ಣು ಸಂಸಾರದ ನೊಗ ಹೊತ್ತು ಮನೆಯ ಒಳಗೂ ಹೊರಗೂ ದುಡಿದು ಸಶಕ್ತೆ ಅನ್ನಿಸಿಕೊಂಡಿದ್ದಾಳೆ. ಸಂಸಾರದಲ್ಲಿ ಇದ್ದುಕೊಂಡು ಔದ್ಯೋಗಿಕ ಕ್ಷೇತ್ರದಲ್ಲಿ ಸಫ‌ಲತೆ ಪಡೆಯಲು ಸುಲಭ ಸಾಧ್ಯವಿಲ್ಲ. ಆದರೆ ಹೆಣ್ಣು ಈ ದಿಕ್ಕಿನಲ್ಲೂ ಮುಂದುವರಿದು ಸರ್ವಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡು ಸಮಾನತೆ ಮೆರೆದಿದ್ದಾಳೆ. ಸರ್ವಶಕ್ತೆಯಾದ ಹೆಣ್ಣಿಗೆ ಅಶಕ್ತೆಯ ಭಾವ ಕಾಡುವುದಾದರೂ ಏಕೆ?. ಯಾವಾಗ ಹೆಣ್ಣು ಸ್ವತಃ ತನ್ನಲ್ಲಿ ತಾನು ವಿಶ್ವಾಸವನ್ನು ಇರಿಸಿ, ಧೈರ್ಯದಿಂದ ಹೆಜ್ಜೆ ಮುಂದಿಡುವ ಸಂಕಲ್ಪ ಮಾಡುವಳ್ಳೋ, ಆವಾಗ ಹೆಣ್ಣಿನ ಸಶಕ್ತೀಕರಣ ಸಾಧ್ಯ. ಆತ್ಮವಿಶ್ವಾಸ, ಎಲ್ಲವನ್ನೂ ಸಾಧಿಸಬಲ್ಲೆ ಎನ್ನುವ ಭರವಸೆಯ ತುಡಿತ, ಹಿಡಿದ ಛಲ ಬಿಡದೆ ಮುನ್ನುಗ್ಗುವಿಕೆ, ಪೊಳ್ಳು ಅಪವಾದಗಳಿಗೆ ತಲೆಬಾಗದೆ ಸ್ವಂತಿಕೆ ಬೆರೆತ ಜೀವನೋತ್ಸಾಹ, ಅಪರಿಮಿತ ಧೈರ್ಯ ಜತೆಗೂಡಿದಾಗ ಹೆಣ್ಣು ಸಶಕ್ತೆಯಾಗಬಲ್ಲಳು.
- ಮಂಜುಳಾ ಪ್ರಸಾದ್‌, ದಾವಣಗೆರೆ

ಟಾಪ್ ನ್ಯೂಸ್

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ

1-qwwqewq

Gadag ವಿರೇಶ್ವರ ಪುಣ್ಯಾಶ್ರಮದಲ್ಲಿ ಅದ್ದೂರಿ ಮಹಾರಥೋತ್ಸವ

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

1-saddsad

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KAYYARA KINNANNA RAI

ಇಂದು ನಾಡಿಗೆ ದೊಡ್ಡಣ್ಣರಾಗಿ ಮೆರೆದ ಕಿಂಞಣ್ಣ ರೈ ಜನ್ಮದಿನ

OCEAN

ಇಂದು World Ocean Day: ಕಡಲ ಉಳಿವಿನಲ್ಲಿ ಅಡಗಿದೆ ನಮ್ಮ ಬದುಕು!

ಸಾಂಪ್ರದಾಯಿಕ ನ್ಯಾಯ ಖಾಪ್‌ ಪಂಚಾಯತ್‌

ಸಾಂಪ್ರದಾಯಿಕ ನ್ಯಾಯ ಖಾಪ್‌ ಪಂಚಾಯತ್‌

Today World Food Safety Day: ಸಶಕ್ತ ಸಮಾಜಕ್ಕಾಗಿ ಸುರಕ್ಷಿತ, ಗುಣಮಟ್ಟದ ಆಹಾರ

Today World Food Safety Day: ಸಶಕ್ತ ಸಮಾಜಕ್ಕಾಗಿ ಸುರಕ್ಷಿತ, ಗುಣಮಟ್ಟದ ಆಹಾರ

National Education Policy: ಪದವಿ ವ್ಯಾಸಂಗದ ಮಹತ್ವ

National Education Policy: ಪದವಿ ವ್ಯಾಸಂಗದ ಮಹತ್ವ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

1-adasds

Hunsur; ಅಕ್ರಮ ಮರಳು ಸಾಗಾಟ;ಟಿಪ್ಪರ್‌ ಗಳು ವಶ, ಚಾಲಕರು ಪರಾರಿ

1-asds-dsad

ವಸತಿ ವಿದ್ಯಾಲಯದಲ್ಲಿ ಬಾಲಕಿ ಆಕಸ್ಮಿಕ ಸಾವು; ಸೂಕ್ತ ತನಿಖೆಗೆ ಬೇಳೂರು ಸೂಚನೆ

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ