ನಟನೆಯಿಂದ ನಿವೃತ್ತಿ… : ನಟ ಶಾರುಖ್ ಖಾನ್ ಹೇಳಿದ್ದೇನು?
Team Udayavani, Feb 20, 2023, 10:03 PM IST
ಮುಂಬೈ: ಪಠಾಣ್ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರು “ನಟನೆಯಿಂದ ಎಂದಿಗೂ ನಿವೃತ್ತಿಯಾಗುವುದಿಲ್ಲ” ಎಂದು ಸೋಮವಾರ ಹೇಳಿದ್ದಾರೆ.
ಟ್ವಿಟರ್ನಲ್ಲಿ #AskSRK ಸೆಷನ್ನಲ್ಲಿ, 57 ವರ್ಷದ ನಟ ಶಾರುಖ್ ಖಾನ್ ಅವರು ”ನನ್ನನ್ನು ವಜಾ ಮಾಡಿದರೂ ಬೌನ್ಸ್ ಆಗಿ ಹಿಂತಿರುಗುತ್ತೇನೆ” ಎಂದು ಹೇಳಿದ್ದಾರೆ.
“ನಾನು ಎಂದಿಗೂ ನಟನೆಯಿಂದ ನಿವೃತ್ತಿಯಾಗುವುದಿಲ್ಲ … ನನ್ನನ್ನು ವಜಾಗೊಳಿಸಬೇಕಾಗುತ್ತದೆ … ಮತ್ತು ಬಹುಶಃ ನಂತರವೂ ನಾನು ಹಿಂತಿರುಗುತ್ತೇನೆ” ಎಂದು ಶಾರುಖ್ ಅವರು ನಿವೃತ್ತಿಯ ನಂತರ ಬಾಲಿವುಡ್ನ ದೊಡ್ಡ ಸೂಪರ್ಸ್ಟಾರ್ ಅವರ ಉತ್ತರಾಧಿಕಾರಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
”ನಟನೆಯನ್ನು ಮುಂದುವರೆಸುತ್ತಿರುವಾಗ ಪರದೆಯ ಮೇಲೆ ನನ್ನನ್ನು ನೋಡುವುದು ವಿಚಿತ್ರವಾಗಿರುತ್ತದೆ” ಎಂದು ಹೇಳಿದರು.
”ಈಗ ನಾನು ಏನನ್ನು ಮಾಡಲು ಇಷ್ಟಪಡುತ್ತೇನೆ ಎಂದು ನಾನು ಭಾವಿಸುತ್ತೇನೆ … ನಾನು ನಟನಾಗಿ ವಿಕಸನಗೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನ ವೈಯಕ್ತಿಕ ಇಷ್ಟಗಳು ಕಡಿಮೆಯಾಗುತ್ತಿವೆ” ಎಂದು ಪಠಾಣ್ ಚಿತ್ರದ ಯಶಸ್ಸಿನ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಶಾರುಖ್ ಖಾನ್ 2023 ರ ಆರಂಭದಲ್ಲಿ ʼಪಠಾಣ್ʼ ಮೂಲಕ ಬಾಲಿವುಡ್ ನಲ್ಲಿ ದೊಡ್ಡ ಹಿಟ್ ಕೊಟ್ಟಿದ್ದಾರೆ. 990 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾ 1000 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್