
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ನಮ್ಮ ಸಹೋದರರು...
Team Udayavani, Mar 26, 2023, 4:26 PM IST

ಬೆಂಗಳೂರು: ಒಬಿಸಿ ಪಟ್ಟಿಯಲ್ಲಿ 2ಬಿ ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿದ ಕಾಂಗ್ರೆಸ್, ಪಕ್ಷ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಕೋಟಾವನ್ನು ಮರುಸ್ಥಾಪಿಸುವುದಾಗಿ ಭಾನುವಾರ ಘೋಷಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಕ್ರಮವನ್ನು ಅಸಂವಿಧಾನಿಕ ಎಂದು ”ಅವರು ಮೀಸಲಾತಿಯನ್ನು ಆಸ್ತಿಯಂತೆ ಹಂಚಬಹುದು ಎಂದು ಭಾವಿಸುತ್ತಾರೆ. ಇದು ಆಸ್ತಿ ಅಲ್ಲ. ಇದು ಅಲ್ಪಸಂಖ್ಯಾತರ ಹಕ್ಕು,ಅವರ ಶೇಕಡಾ ನಾಲ್ಕನ್ನು ರದ್ದುಪಡಿಸಿ ಯಾವುದೇ ಪ್ರಮುಖ ಸಮುದಾಯಗಳಿಗೆ ನೀಡುವುದನ್ನು ನಾವು ಬಯಸುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ನಮ್ಮ ಸಹೋದರರು ಮತ್ತು ಕುಟುಂಬದ ಸದಸ್ಯರು”ಎಂದರು.
ಇಡೀ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತಿದ್ದಾರೆ. ಮುಂದಿನ 45 ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ನಾವು ಇದನ್ನೆಲ್ಲ ರದ್ದುಗೊಳಿಸುತ್ತೇವೆ ಮತ್ತು ಮುಸ್ಲಿಮರನ್ನು ಒಬಿಸಿ ಪಟ್ಟಿಯಿಂದ ತೆಗೆದುಹಾಕಲು ಯಾವುದೇ ಆಧಾರವಿಲ್ಲ ಚುನಾವಣೆಯಲ್ಲಿ ಸೋಲನುಭವಿಸುತ್ತಿರುವ ಸಂದರ್ಭದಲ್ಲಿ ಬೊಮ್ಮಾಯಿ ಸರ್ಕಾರವು ಭಾವನಾತ್ಮಕ ವಿಚಾರಗಳನ್ನು ತೆಗೆದುಕೊಳ್ಳುತ್ತಿದೆ. ಪಕ್ಷದ ಅಧ್ಯಕ್ಷರಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪುಟದ ಮೊದಲ ಸಭೆಯಲ್ಲಿ ಕೋಟಾವನ್ನು ಮರುಸ್ಥಾಪಿಸುವ ನಿರ್ಧಾರ ಘೋಷಿಸಲು ಬಯಸುವುದಾಗಿ ಹೇಳಿದರು.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯು ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತರಿಗೆ ತಲಾ ಎರಡರಂತೆ ಈ ಪ್ರಮಾಣವನ್ನು (ಶೇ 4) ಸಮಾನವಾಗಿ ವಿಭಜಿಸಲು ನಿರ್ಧರಿಸಿದೆ, ಇದನ್ನು ಎರಡು ರಾಜಕೀಯವಾಗಿ ಪ್ರಭಾವಿ ಸಮುದಾಯಗಳು ಸ್ವಾಗತಿಸಿದ್ದವು. ಮುಸ್ಲಿಮರಿಗೆ 10 ಪ್ರತಿಶತದಷ್ಟು ಆರ್ಥಿಕ ದುರ್ಬಲ ವರ್ಗಗಳ (EWS) ಮೀಸಲಾತಿ ನೀಡುವುದಾಗಿ ತಿಳಿಸಿತ್ತು.
ಟಾಪ್ ನ್ಯೂಸ್
