
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ನಿತು, ಮನೀಷಾ ಕ್ವಾರ್ಟರ್‌ಫೈನಲಿಗೆ
Team Udayavani, Mar 22, 2023, 8:32 AM IST

ನವದೆಹಲಿ: ಇಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಮೊದಲ ಅವಧಿಯಲ್ಲಿ ಭಾರತದ ಬಾಕ್ಸರ್‌ಗಳಾದ ನಿತು ಘಂಘಾಸ್ (48 ಕೆಜಿ) ಮತ್ತು ಮನೀಷಾ ಮೌನ್ (57 ಕೆಜಿ) ಅವರು ಆರ್‌ಎಸ್‌ಸಿ ಆಧಾರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ನಿತು ಅವರು ತನ್ನ 16ನೇ ಸುತ್ತಿನ ಪಂದ್ಯದಲ್ಲಿ ತಜಕಿಸ್ಥಾನದ ಸುಮೈಯಾ ಕೊಸಿಮೊವಾ ವಿರುದ್ಧ ಜಯ ಗಳಿಸಿದರೆ, ಕಳೆದ ವರ್ಷದ ಕಂಚಿನ ಪದಕ ವಿಜೇತೆ ಮನೀಷಾ ಟರ್ಕಿಯ ನೂರ್‌ಎಲಿಫ್ ತುರ್ಹಾನ್‌ರನ್ನು ಸೋಲಿಸಿದರು. ರೆಫ್ರಿ ಸ್ಪರ್ಧೆಯನ್ನು ನಿಲ್ಲಿಸುವ (ಆರ್‌ಎಸ್‌ಸಿ) ಅವರಿಬ್ಬರು ಗೆಲುವನ್ನು ಒಲಿಸಿಕೊಂಡರು. ಇದೇ ವೇಳೆ ಶಶಿ ಚೋಪಾx (63 ಕೆಜಿ), ಜಪಾನಿನ ಮೈ ಕಿಟೊ ವಿರುದ್ಧ 0-4 ರಿಂದ ಸೋತು ಪಂದ್ಯಾವಳಿಯಿಂದ ಹೊರಬಿದ್ದರು.
ನಿತು ತನ್ನ ನೇರ ಹೊಡೆತಗಳಿಂದ ಸುಮೈಯಾ ಅವರನ್ನು ಕಡಹಲು ಯಶಸ್ವಿಯಾದರು. ಅನುಭವಿ ಮನೀಷಾ ಕೂಡ ಬಿರುಸಿನ ಹೊಡೆತಗಳಿಂದ ಎದುರಾಳಿಯನ್ನು ನೆಲಕ್ಕುರುಳಿಸಿ ಮೇಲುಗೈ ಸಾಧಿಸಿದರು.
ಟಾಪ್ ನ್ಯೂಸ್
