ರಷ್ಯಾಕ್ಕೆ ಭೇಟಿ ನೀಡಲಿರುವ ಚೀನಾ ಅಧ್ಯಕ್ಷ ಜಿನ್ಪಿಂಗ್; ಮಹತ್ವದ ಚರ್ಚೆ ಸಾಧ್ಯತೆ
Team Udayavani, Mar 17, 2023, 3:29 PM IST
ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮುಂದಿನ ವಾರ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಬೀಜಿಂಗ್ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದು ಸುಮಾರು ನಾಲ್ಕು ವರ್ಷಗಳ ನಂತರ ಮಾಸ್ಕೋಗೆ ಅವರ ಮೊದಲ ಪ್ರವಾಸವಾಗಿದೆ.
“ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ, ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮಾರ್ಚ್ 20 ರಿಂದ 22 ರವರೆಗೆ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಬೀಜಿಂಗ್ನಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಪುಟಿನ್ ಭಾಗವಹಿಸಿದ್ದರು, ಸೆಪ್ಟೆಂಬರ್ನಲ್ಲಿ ಉಜ್ಬೇಕಿಸ್ಥಾನ್ನಲ್ಲಿ ನಡೆದ ಪ್ರಾದೇಶಿಕ ಭದ್ರತಾ ಸಭೆಯಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು. ಕ್ಸಿ ಕೊನೆಯದಾಗಿ 2019 ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು.
ಕ್ರೆಮ್ಲಿನ್ನಿಂದ ಏಕಕಾಲಿಕ ಹೇಳಿಕೆಯ ಪ್ರಕಾರ, ನಾಯಕರಿಬ್ಬರು ಕಾರ್ಯತಂತ್ರದ ಸಹಕಾರ ಕುರಿತು ಮಾತನಾಡಲಿದ್ದಾರೆ. ರಷ್ಯಾ ಮತ್ತು ಚೀನಾ ನಡುವಿನ ಸಮಗ್ರ ಪಾಲುದಾರಿಕೆ ಮತ್ತು ಕಾರ್ಯತಂತ್ರದ ಸಹಕಾರವನ್ನು ಆಳವಾಗಿ ಚರ್ಚಿಸುತ್ತಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಮುಖ ದ್ವಿಪಕ್ಷೀಯ ದಾಖಲೆಗಳಿಗೆ ಸಹಿ ಹಾಕಲಾಗುತ್ತದೆ ಎಂದು ತಿಳಿಸಿದೆ.
ಈ ಭೇಟಿಯು ನೆರೆಯ ಉಕ್ರೇನ್ನ ರಷ್ಯಾದ ಆಕ್ರಮಣದ ಒಂದು ವರ್ಷವಾದ ಬಳಿಕ ನಡೆಯುತ್ತಿದೆ. ಚೀನಾ ಸಂಘರ್ಷದಲ್ಲಿ ತಟಸ್ಥವೆಂದು ಬಿಂಬಿಸಲು ಪ್ರಯತ್ನಿಸಿದೆ, ಆದರೆ ಅದರ ಸ್ಥಾನವು ಕೆಲವು ಪಾಶ್ಚಿಮಾತ್ಯ ನಾಯಕರು ವಿಶ್ವಾಸಾರ್ಹತೆಯ ಕೊರತೆ ಮತ್ತು ಮಾಸ್ಕೋಗೆ ಮೌನ ಬೆಂಬಲವನ್ನು ನೀಡುತ್ತದೆ ಎಂದು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ