
ಯಶಸ್ವಿನಿ ನೋಂದಣಿ 31ರ ವರೆಗೆ ವಿಸ್ತರಣೆ
Team Udayavani, Jan 3, 2023, 6:38 AM IST

ಬೆಂಗಳೂರು: ಯಶಸ್ವಿನಿ ಆರೋಗ್ಯ ರಕ್ಷಣ ಯೋಜನೆಯಡಿ ಸದಸ್ಯತ್ವ ನೋಂದಣಿ ಅವಧಿಯನ್ನು ಜ. 31ರ ವರೆಗೆ ವಿಸ್ತರಿಸಿ ಸಹಕಾರ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಉದ್ದೇಶಿತ ಯೋಜನೆ ಜಾರಿ ಮತ್ತು ಹೊಸ ಸದಸ್ಯತ್ವ ನೋಂದಣಿಗೆ 2022ರ ಡಿ. 31 ಕೊನೆಯ ದಿನವಾಗಿತ್ತು. ಆದರೆ ಈ ಅವಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದಸ್ಯ ನೋಂದಣಿ ಸಾಧ್ಯವಾಗಿಲ್ಲ. ಅಲ್ಲದೆ ಅನೇಕ ಸಹಕಾರ ಸಂಘಗಳ ಸದಸ್ಯರು, ಸಹಕಾರಿಗಳು, ವಿಧಾನಸಭೆ ಮತ್ತು ಪರಿಷತ್ತಿನ ಶಾಸಕರು ನೋಂದಣಿ ಅವಧಿ ವಿಸ್ತರಣೆಗೆ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ಅವಧಿಯನ್ನು ಒಂದು ತಿಂಗಳು ಅಂದರೆ ಜ. 31ರ ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಯಶಸ್ವಿನಿ ಆರೋಗ್ಯ ರಕ್ಷಣ ಯೋಜನೆ ಅಡಿ ಸುಮಾರು 30 ಲಕ್ಷ ನೋಂದಣಿ ಗುರಿಯನ್ನು ಯಶಸ್ವಿನಿ ಸಹಕಾರ ಸದಸ್ಯರ ಆರೋಗ್ಯ ರಕ್ಷಣ ಟ್ರಸ್ಟ್ ಹೊಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ಯಾರಂಟಿಗೆ ಹಣಕಾಸು ಇಲಾಖೆಯ ಷರತ್ತು ! ಷರತ್ತು ಇಲ್ಲದೆ ಜಾರಿ ಅಸಾಧ್ಯ ಎಂದ ಅಧಿಕಾರಿಗಳು

ದಕ್ಷಿಣ ಒಳನಾಡು, ಕರಾವಳಿಯಲ್ಲಿ 5 ದಿನ ಮಳೆ ಸಾಧ್ಯತೆ

ಶಿಕ್ಷಕರ ವರ್ಗಾವಣೆಗೆ ಸರಕಾರ ಒಪ್ಪಿಗೆ: 75 ಸಾವಿರಕ್ಕೂ ಹೆಚ್ಚು ಶಿಕ್ಷಕರಿಂದ ಅರ್ಜಿ

ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆಗೆ ಹೆಚ್ಚುವರಿ ಖಾತೆ ಹಂಚಿಕೆ

Law: ಮೃತದೇಹಗಳ ಮೇಲೆ ಅತ್ಯಾಚಾರವೆಸಗುವವರಿಗೆ ಶಿಕ್ಷೆ: ಕಾನೂನು ತಿದ್ದುಪಡಿಗೆ ಶಿಫಾರಸು