
ಬಾಳಿಯೂರು ಜಂಕ್ಷನ್: ಶಾಲಾ ಬಸ್-ಬೈಕ್ ಢಿಕ್ಕಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳ ಸಾವು
Team Udayavani, Jan 14, 2023, 12:22 AM IST

ಮಂಜೇಶ್ವರ: ಮೀಯ ಪದವು ಬಳಿಯ ಬಾಳಿಯೂರು ಜಂಕ್ಷನ್‌ನಲ್ಲಿ ಶಾಲಾ ಬಸ್ ಹಾಗೂ ಬೈಕ್ ಢಿಕ್ಕಿ ಹೊಡೆದು ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವಿಗೀಡಾಗಿ, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಮೀಯಪದವು ನಿವಾಸಿ, ಮೀಯ ಪದವು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ದರ್ಬೆ ಹರೀಶ್ ಶೆಟ್ಟಿ ಅವರ ಪುತ್ರ ಪ್ರೀತೇಶ್ ಶೆಟ್ಟಿ (20) ಹಾಗೂ ಮೀಯಪದವು ಬಳಿಯ ಬೆಜ್ಜಂಗಳ ನಿವಾಸಿ ಸುರೇಶ್ ಭಂಡಾರಿ ಅವರ ಪುತ್ರ ಅಭಿಷೇಕ್ (20) ಸಾವಿಗೀಡಾದವರು. ಚಿಗುರುಪಾದೆ ಕುಳೂರು ನಿವಾಸಿ ನಮಿತ್ (19) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರೀತೇಶ್ ಶೆಟ್ಟಿ ಮಂಗಳೂರಿನ ಬಜಪೆಯ ಶ್ರೀ ದೇವಿ ಕಾಲೇಜಿನಲ್ಲಿ ಏವಿಯೇಶನ್ ಕೋರ್ಸ್ ಮಾಡು ತ್ತಿದ್ದರು. ಅಭಿಷೇಕ್ ಮಂಗಳೂರಿನ ಪ್ರೇರಣ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ನಮಿತ್ ಕೂಡ ಅದೇ ಕಾಲೇಜಿನಲ್ಲಿ ಪ್ರಥಮ ವರ್ಷ ಪದವಿ ಓದುತ್ತಿದ್ದಾರೆ. ಕಾಲೇಜಿಗೆಂದು ಬೈಕಿನಲ್ಲಿ ಹೋಗು ತ್ತಿದ್ದಾಗ ಉಪ್ಪಳದಿಂದ ಮೀಯಪದವು ಭಾಗಕ್ಕೆ ಹೋಗುತ್ತಿದ್ದ ಖಾಸಗಿ ಶಾಲಾ ಬಸ್ ಢಿಕ್ಕಿ ಹೊಡೆದಿದೆ. ಗಾಯಗೊಂಡ ಮೂವರನ್ನೂ ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪ್ರೀತೇಶ್ ಹಾಗೂ ಅಭಿಷೇಕ್ ದಾರಿಮಧ್ಯೆ ಸಾವಿಗೀಡಾದರು. ಪ್ರೀತೇಶ್ ಶೆಟ್ಟಿ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಅಭಿಷೇಕ್ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಪ್ರೀತೇಶ್ ಶೆಟ್ಟಿಯ ತಂದೆ ಹಾಗೂ ಸಹೋದರ ಪ್ರಜ್ಞೆàಶ್ ಶಬರಿಮಲೆ ಯಾತ್ರೆಗೆ ತೆರಳಿದ್ದಾರೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
