ಸ್ಕ್ರಾಚ್ ವ್ಯಾಪಾರಿಗಳ ಸಂಗಮ
Team Udayavani, Dec 7, 2020, 10:27 PM IST
ಕಾಸರಗೋಡು: ಇಂಡಿಯನ್ ಸ್ಕ್ರಾಚ್ ಮರ್ಚೆಂಟ್ಸ್ ಅಸೋಸಿಯೇಶನ್ (ಐಎಸ್‌ಎಂಎ) ನೇತೃತ್ವದಲ್ಲಿ ಸ್ಕ್ರಾಚ್ ವ್ಯಾಪಾರಿಗಳ ಸಂಗಮ ನಡೆಯಿತು. ಸಂಗಮದಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.
ಉಡುಪಿ ಗಾರ್ಡನ್ ಆಡಿಟೋರಿಯಂನಲ್ಲಿ ನಡೆದ ಸಭೆಯನ್ನು ಹನೀಫ್ ಬೇವಿಂಜೆ ಉದ್ಘಾಟಿಸಿದರು. ಅಖೀಲ ಭಾರತ ಅಧ್ಯಕ್ಷ ಫೈಝಲ್ ಕಾನಂ ಪರಂಬಿಲ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಸಂಚಾಲಕ ಶಾಫಿ ಕೊಲ್ಲಂ ಸಂಘಟನೆಯ ಉದ್ದೇಶ ಮಂಡಿಸಿದರು. ಸಭೆಯಲ್ಲಿ ವಯನಾಡು ಜಿಲ್ಲಾ ಅಧ್ಯಕ್ಷ ಆಟ್ಟಕೋಯ, ಪೋಲ್ಸನ್, ಶಿಬು ಶಫೀಖ್, ಜೇಮ್ಸ್, ಜಬ್ಟಾರ್ ಮೊದಲಾದವರು ಮಾತನಾಡಿದರು.
ಜಿಲ್ಲಾ ಚೆಯರ್‌ವೆುನ್ ಆಗಿ ಗಂಗಾಧರ ಪೊದುವಾಳ್, ಜಿಲ್ಲಾ ಅಧ್ಯಕ್ಷರಾಗಿ ಇಬ್ರಾಹಿಂ ಚೆಮ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ಅಜಿ ಮಾವುಂಗಾಲ್, ಜಿಲ್ಲಾ ಕೋಶಾಧಿಕಾರಿಯಾಗಿ ಮುನೀರ್ ನೀಲೇಶ್ವರ, ಪದಾಧಿಕಾರಿಗಳಾಗಿ ಅಬ್ದುಲ್ಲ ಕುಣಿಯ, ಕಾದರ್ ಪಾರಪಳ್ಳಿ, ರಫೀಖ್, ಮಜೀದ್, ಸುಬೈರ್ ಬೇವಿಂಜೆ ಆಯ್ಕೆಯಾದರು. ಕೆ. ಮುಹಮ್ಮದ್ ಕುಂಞಿಬೇವಿಂಜೆ ವಂದಿಸಿದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444