
ಪಿಂಚಣಿದಾರರಿಂದ ಡಿ.ಸಿ. ಕಚೇರಿಗೆ ಜಾಥಾ
Team Udayavani, Jul 18, 2019, 5:52 AM IST

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇರಳ ರಾಜ್ಯ ಸೇವಾ ಪಿಂಚಣಿದಾರರ ಯೂನಿಯನ್ ನೇತೃತ್ವದಲ್ಲಿ ಬುಧವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಮತ್ತು ಧರಣಿ ನಡೆಯಿತು.
ಪಾಲುದಾರಿಕೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು, ಸ್ಟಾಚೂÂಟರಿ ಪಿಂಚಣಿಯನ್ನು ಪುನಃ ಸ್ಥಾಪಿಸಬೇಕು, 2019ರ ಜುಲೈ 1ರಿಂದ ಅನ್ವಯವಾಗುವಂತೆ ಪಿಂಚಣಿ ಪರಿಷ್ಕರಿಸುವ ವ್ಯವಸ್ಥೆ ಕೂಡಲೇ ಜಾರಿಯಾಗಬೇಕು, 70 ವರ್ಷ ಪ್ರಾಯ ದಾಟಿದ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ನೀಡಬೇಕು, ಪಿಂಚಣಿದಾರರಿಗೆ ಪ್ರತ್ಯೇಕ ಚಿಕಿತ್ಸಾ ಯೋಜನೆ ಜಾರಿಗೊಳಿಸಬೇಕು, ಮೆಡಿಕಲ್ ಹೆಲ್ತ್ ಇನ್ಶೂರೆನ್ಸ್ ಜಾರಿಗೊಳಿಸಬೇಕು, ಕ್ಷೇಮ ಯೋಜನೆ ಜಾರಿಗೊಳಿಸಬೇಕು, 20 ವರ್ಷ ಸರ್ವೀಸ್‌ನಲ್ಲಿದ್ದವರಿಗೆ ಪೂರ್ಣ ಪ್ರಮಾಣದಲ್ಲಿ ಪಿಂಚಣಿ ನೀಡಬೇಕು, ಒಂದು ತಿಂಗಳ ವೇತನವನ್ನು ಉತ್ಸವ ಪಿಂಚಣಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಮತ್ತು ಧರಣಿ ಆಯೋಜಿಸಿತ್ತು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಕೆ. ಮಾಧವನ್ ನಾಯರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷ ವಿ. ಕೃಷ್ಣನ್ ಉದ್ಘಾಟಿಸಿದರು. ಧರಣಿಗೆ ಮುನ್ನ ಪಿಂಚಣಿದಾರರಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
