
ಯಕ್ಷಪುತ್ಥಳಿ ಬೊಂಬೆ ಮನೆಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ
Team Udayavani, Feb 23, 2023, 5:10 AM IST

ಕಾಸರಗೋಡು: ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ ಅವರು ಕಾಸರಗೋಡಿನ ಯಕ್ಷಪುತ್ಥಳಿ ಬೊಂಬೆ ಮನೆಗೆ ಬುಧವಾರ ಮಧ್ಯಾಹ್ನ ಭೇಟಿ ನೀಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಪಿಲಿಕುಂಜೆಯಲ್ಲಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನೇತೃತ್ವದಲ್ಲಿ ಯಕ್ಷಗಾನ ಬೊಂಬೆಯಾಟ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಸಂಘದ ಸಾಧನೆಯನ್ನು ಶ್ಲಾಘಿಸಿದ ಅಧ್ಯಕ್ಷರು ನಿರ್ಮಾಣವಾಗುತ್ತಿರುವ ಯಕ್ಷಪುತ್ಥಳಿಗಳನ್ನು ನೋಡಿ ಹರ್ಷ ವ್ಯಕ್ತಪಡಿಸಿದರು.
ಕೊಂಡೆವೂರಿಗೆ ಭೇಟಿ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಭೇಟಿ ನೀಡಿದ ಡಾ| ಸಿ. ಸೋಮಶೇಖರ ಅವರು ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಆ ಬಳಿಕ ಕೊಂಡೆವೂರಿನ ಶಾಲೆಗೆ ಭೇಟಿ ನೀಡಿ ನಿರ್ವಹಣೆಯನ್ನು ವೀಕ್ಷಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Kushtagi: ಸಾವಿನಲ್ಲೂ ಒಂದಾದ ದಂಪತಿ

Jammu and Kashmir: ಜಮ್ಮು- ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಯೋಧರಿಗೆ ಗಾಯ

Daily Horoscope: ಗಟ್ಟಿ ನಿರ್ಧಾರದಿಂದ ಮುಂದಡಿಯಿಡಿ, ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯ ಕಾಲ

Udupi ಕರಾವಳಿಯ 59 ಗ್ರಾಮ ಪಂಚಾಯತ್‌ಗಳಲ್ಲಿ ಕೂಸಿನ ಮನೆ

Congress Vs JDS “ಈ ಹಿಂದೆ ನೀವೂ ಫುಟ್ ಬಾಲ್ ಆಡಿಲ್ಲವೇ?’ಎಚ್‌ಡಿಡಿಗೆ ಡಿಕೆಶಿ ತಿರುಗೇಟು