

Team Udayavani, Jun 22, 2024, 5:29 PM IST
ಮಡಿಕೇರಿ: ಆಹಾರ ಆರಿಸಿ ಕಾಡಿನಿಂದ ಕಾಫಿ ತೋಟಕ್ಕೆ ಬಂದ ಕಾಡಾನೆಗಳ ಗುಂಪಿನ ಪೈಕಿ 13 ವರ್ಷ ಪ್ರಾಯದ ಗಂಡಾನೆಯೊಂದು ಆಕಸ್ಮಿಕವಾಗಿ ಕೆರೆಯಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಅಮ್ಮತ್ತಿ ಸಮೀಪದ ಒಂಟಿಯಂಗಡಿಯ ಪಚ್ಚಾಟ್ ಎಂಬಲ್ಲಿ ನಡೆದಿದೆ.
ನಂದ ಎಂಬುವವರಿಗೆ ಸೇರಿದ ಕೆರೆಗೆ ಬಿದ್ದ ಕಾಡಾನೆ ಮೇಲೆ ಬರಲು ಸಾಧ್ಯವಾಗದೆ ನೀರಿನಲ್ಲಿ ಸಿಲುಕಿ ಮೃತಪಟ್ಟಿದೆ.
ಗುಯ್ಯ, ಹಚ್ಚಿನಾಡು, ಕಣ್ಣಂಗಾಲ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬಿಡು ಬಿಟ್ಟಿದ್ದ ಕಾಡಾನೆಗಳು ರಾತ್ರಿ ಪಚ್ಚಾಡ್ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡಿವೆ.
ಆನೆಗಳ ಪೈಕಿ 13 ವರ್ಷ ಪ್ರಾಯದ ಗಂಡಾನೆಯೊಂದು ಕಾಫಿ ತೋಟದಲ್ಲಿದ್ದ ಕೆರೆಯ ನೀರಿನಲ್ಲಿ ಸಿಲುಕಿ ಮೃತಪಟ್ಟಿದೆ
ವಿಷಯ ತಿಳಿದ ತೋಟದ ಮಾಲೀಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಡಿಎಫ್ ಓ ಜಗನ್ನಾಥ್ , ಎಸಿಎಫ್ ನೆಹರು, ಆರ್‌ಎಫ್ ಓ ಕಳ್ಳಿರ ಎಂ ದೇವಯ್ಯ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೀರಿನಲ್ಲಿದ್ದ ಆನೆಯ ಮೃತ ದೇಹವನ್ನು ಜೆಸಿಬಿ ಮೂಲಕ ಹೊರ ತೆಗೆದ ನಂತರ ವನ್ಯಜೀವಿ ವೈದ್ಯರಾದ ಡಾ.ಚೆಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡಲಾಗಿದೆ.
ಉಪ ವಲಯ ಅರಣ್ಯ ಅಧಿಕಾರಿಗಳಾದ ಸಂಜಿತ್ ಸೋಮಯ್ಯ, ಪ್ರಶಾಂತ್ ಸೇರಿದಂತೆ ಆರ್ ಆರ್ ಟಿ ಹಾಗೂ ಕಾರ್ಯಪಡೆ ತಂಡದ ಸಿಬ್ಬಂದಿಗಳ ಹಾಜರಿದ್ದರು.
Ad
Kasaragod: ತಡೆಗೋಡೆಗೆ ಕಾರು ಢಿಕ್ಕಿ: ನಾಲ್ವರಿಗೆ ಗಾಯ
Kasaragod: ವೈದ್ಯನೆಂದು ನಂಬಿಸಿ ಮಹಿಳೆಗೆ ಕಿರುಕುಳ; ಆರೋಪಿ ವಶಕ್ಕೆ; ನ್ಯಾಯಾಲಯಕ್ಕೆ ಅರ್ಜಿ
Kasaragod: ಶಾಲೆಯ ಅಭಿವೃದ್ಧಿ ನಿಧಿ ವಂಚನೆ; ಮಾಜಿ ಪ್ರಭಾರ ಪ್ರಾಂಶುಪಾಲರ ವಿರುದ್ಧ ದೂರು
Kasaragod: ಯುವಕನನ್ನು ಅಪಹರಿಸಿ ಸುಲಿಗೆ ಪ್ರಕರಣ; ಸೂತ್ರಧಾರನ ಬಂಧನ
ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ
Odisha: ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾ*ವು
ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ
ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್ ಬಿ.ಸರೋಜಾ ದೇವಿ
Editorial: ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಕ್ರಮ ಅತ್ಯಗತ್ಯ
You seem to have an Ad Blocker on.
To continue reading, please turn it off or whitelist Udayavani.