Udayavni Special

ಕಾಸರಗೋಡು: 7 ಮಂದಿಗೆ ಸೋಂಕು


Team Udayavani, Apr 4, 2020, 11:09 AM IST

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಒಟ್ಟು 9 ಮಂದಿಯನ್ನು ಕೋವಿಡ್ 19 ವೈರಸ್‌ ಸೋಂಕು ಬಾಧಿಸಿರುವುದು ದೃಢವಾಗಿದೆ. ಈ ಪೈಕಿ 7 ಮಂದಿ ಕಾಸರಗೋಡು ಜಿಲ್ಲೆಯವರು. ಕಣ್ಣೂರು ಹಾಗು ತೃಶ್ಶೂರ್‌ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢವಾಗಿದೆ.

ಕೇರಳದಲ್ಲಿ ಶುಕ್ರವಾರ 14 ಮಂದಿ ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಣ್ಣೂರು-5, ಕಾಸರಗೋಡು-3, ಇಡುಕ್ಕಿ-2, ಕಲ್ಲಿಕೋಟೆ-2, ಪತ್ತನಂತಿಟ್ಟ ಮತ್ತು ಕೋಟ್ಟಯಂಗಳಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಈ ವರೆಗೆ 295 ಮಂದಿಗೆ ಕೋವಿಡ್ 19 ಸೋಂಕು ತಗಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ 135ಕ್ಕೇರಿದೆ.

ರೋಗ ಬಾಧಿತರಲ್ಲಿ 206 ಮಂದಿ ವಿದೇಶದಿಂದ ಬಂದವರು. 7 ಮಂದಿ ವಿದೇಶಿಗರು. ಕೋವಿಡ್ 19  ವೈರಸ್‌ ಸೋಂಕಿತರೊಂದಿಗಿನ ಸಂಪರ್ಕದಿಂದ 78 ಮಂದಿಗೆ ರೋಗ ಬಾಧಿಸಿದೆ.
ಮೂವರು ಗರ್ಭಿಣಿಯರು, ಐವರು ಮಕ್ಕಳು ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ದೃಢವಾಗಿರುವ 128 ಮಂದಿಯಲ್ಲಿ ಮೂವರು ಗರ್ಭಿಣಿಯರು ಮತ್ತು ಐವರು 15 ವರ್ಷಕ್ಕಿಂತ ಕೆಳಗಿನ ಮಕ್ಕಳು.

ಗರ್ಭಿಣಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಎ.ವಿ. ರಾಮದಾಸ್‌ ತಿಳಿಸಿದ್ದಾರೆ.

ರೋಗಿಗಳ ಸಂಪರ್ಕದಿಂದಾಗಿ ಅವರಿಗೆ ಕೋವಿಡ್ 19  ಬಾಧಿಸಿದೆ. ಐವರು ಮಕ್ಕಳ ಪೈಕಿ ಇಬ್ಬರು ಎರಡು ವರ್ಷಕ್ಕಿಂತ ಕೆಳ ಹರೆಯದವರು. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಥಮವಾಗಿ ಸೋಂಕು ವರದಿಯಾದ ಚೀನದ ವೂಹಾನ್‌ನಿಂದ ಬಂದಿದ್ದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಜಿಲ್ಲೆಯಲ್ಲಿ ಚೆಮ್ನಾಡ್‌, ಮಧೂರು, ಮೊಗ್ರಾಲ್‌ಪುತ್ತೂರು, ಚೆಂಗಳ, ಪಳ್ಳಿಕೆರೆ, ಉದುಮ ಪಂಚಾಯತ್‌ಗಳು ಮತ್ತು ಕಾಸರಗೋಡು ನಗರಸಭೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ 19 ಬಾಧಿತರಿದ್ದಾರೆ. ಈ ಪ್ರದೇಶಗಳಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ.

ಮೂವರು ದಿಲ್ಲಿ ಸಮಾವೇಶದಿಂದ ಮರಳಿದವರು
ಶುಕ್ರವಾರ ಸೋಂಕು ದೃಢವಾದವರಲ್ಲಿ ಮೂವರು ದಿಲ್ಲಿಯ ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗವಹಿಸಿ ವಾಪಸಾಗಿ ನಿಗಾದಲ್ಲಿದ್ದವರು. ಇನ್ನೋರ್ವ ಗುಜರಾತ್‌ ನಿವಾಸಿ. ರಾಜ್ಯದಲ್ಲಿ ಒಟ್ಟು 1,69,997 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 1,69,291 ಮಂದಿ ಮನೆಗಳಲ್ಲೂ, 706 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ ರಾಣಿ ನಿವಾಸಿಗಳಾದ ದಂಪತಿ ಹಾಗೂ ಅವರಿಗೆ ಶುಶ್ರೂಷೆ ನೀಡಿದ ದಾದಿ ಗುಣಮುಖರಾಗಿ ಕೋಟ್ಟrಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಬಿಡುಗಡೆಗೊಂದ್ದಾರೆ. ಎ. 3ರಂದು ರಾಜ್ಯದಲ್ಲಿ 154 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 251 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟಾಪ್ ನ್ಯೂಸ್

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯ 12 ಮಂದಿಯಲ್ಲಿ ಸೋಂಕು

ಕಾಸರಗೋಡು ಜಿಲ್ಲೆಯ 12 ಮಂದಿಯಲ್ಲಿ ಸೋಂಕು

MUST WATCH

udayavani youtube

ಚರಂಡಿಯಲ್ಲಿ ಬಿದ್ದಿದ್ದ ಹೋರಿ ರಕ್ಷಣೆ

udayavani youtube

ಈ ಅಂಗಡಿಯಲ್ಲಿ ದೊರೆಯುವ ಎಲ್ಲಾ ಸಾಮಗ್ರಿಗಳು ಶೇ.100 ರಷ್ಟು ರಾಸಾಯನಿಕ ರಹಿತ!

udayavani youtube

LIVE : ವಿಧಾನಸಭೆ​ ಕಲಾಪ ನೇರ ಪ್ರಸಾರ | 15th Assembly | 10th Session | 23-09-2021

udayavani youtube

ಮಹಿಳೆಯಿಂದ ಮಸಾಜ್‌ ಮಾಡಿಸಿಕೊಂಡ ಶಿಕ್ಷಕ ಅಮಾನತು|

udayavani youtube

ಉಡುಪಿ ಮುಳುಗುತ್ತಾ ?

ಹೊಸ ಸೇರ್ಪಡೆ

Untitled-2

ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ 

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.