
ಶಬರಿಮಲೆ ರೈಲ್ವೇ ಯೋಜನೆಗೆ ಕೇರಳ ಸರಕಾರ ಒಪ್ಪಿಗೆ
Team Udayavani, Jan 12, 2021, 2:09 AM IST

ಕಾಸರಗೋಡು: ಅಂಗಮಾಲಿಯಿಂದ ಎರುಮೇಲಿ ತನಕದ ನೂತನ ಶಬರಿ ರೈಲು ಹಳಿ ನಿರ್ಮಿಸುವ ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ. 50ರಷ್ಟು ಮೊತ್ತವನ್ನು ಕೇರಳ ಸರಕಾರವೇ ಭರಿಸುವುದಾಗಿ ಒಪ್ಪಿಗೆ ಸೂಚಿಸಿದೆ.
ಒಟ್ಟು 2,815 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಅರ್ಧದಷ್ಟು ಮೊತ್ತವನ್ನು ಕಿಫ್‌ಬಿ ಸಂಸ್ಥೆಯ ಮೂಲಕ ಸಂಗ್ರಹಿಸಿ ಭರಿಸಲು ಕೇರಳ ಸರಕಾರವು ತೀರ್ಮಾನಿಸಿದೆ. ಉಳಿದ ಶೇ. 50 ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ. ಶಬರಿಮಲೆಯನ್ನು ರಾಷ್ಟ್ರೀಯ ತೀರ್ಥಾಟನಾ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಈ ಹೊಸ ರೈಲು ಹಳಿ ಯೋಜನೆಯನ್ನು ಕೈಗೊಳ್ಳಲಾಗಿದೆ.
ಹೊಸದಿಲ್ಲಿಗೆ ನಿತ್ಯ ನೇರ ವಿಮಾನ :
ಮಂಗಳೂರು: ಮಂಗಳೂರಿನಿಂದ ಹೊಸದಿಲ್ಲಿಗೆ ಪ್ರತಿದಿನ ನೇರ ವಿಮಾನ ಸೇವೆ ಮತ್ತೆ ಆರಂಭವಾಗಿದೆ.
ಇಂಡಿಗೋ 6ಇ 6698 ವಿಮಾನವು ಮಂಗಳೂರಿನಿಂದ ರಾತ್ರಿ 9.50ಕ್ಕೆ ಹೊರಟು ಹೊಸದಿಲ್ಲಿಗೆ ತೆರಳಿದರೆ, 6ಇ 671 ವಿಮಾನವು ಹೊಸದಿಲ್ಲಿಯಿಂದ ಸಂಜೆ 6 ಗಂಟೆಗೆ ಹೊರಟು ಮಂಗಳೂರು ತಲುಪುತ್ತದೆ.
ಲಾಕ್‌ಡೌನ್ ಬಳಿಕ ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆ ಇತ್ತಾದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಎಂಬ ಕಾರಣದಿಂದ ಕೊಂಚ ದಿನ ಸ್ಥಗಿತವಾಗಿತ್ತು. ಮತ್ತೆ ನೇರ ವಿಮಾನ ಸೇವೆ ಆರಂಭವಾಗಿದೆ. ಜತೆಗೆ ಮಂಗಳೂರಿನಿಂದ ಮುಂಬಯಿ ಹಾಗೂ ಬೆಂಗಳೂರಿಗೆ ತೆರಳಿದ ಇಂಡಿಗೋ ವಿಮಾನದ ಮುಖೇನವೂ ಹೊಸದಿಲ್ಲಿಗೆ ತೆರಳಲು ಅವಕಾಶವಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

expose ಬಸ್ಸಿನಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿದ ಕಾಮುಕನ ಬಂಧನ

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

ಪಣಜಿ: ಮುಂದಿನ ನಾಲ್ಕು ದಿನ ಗೋವಾದಲ್ಲಿ ಗುಡುಗು ಸಹಿತ ಮಳೆ… ಹವಾಮಾನ ಇಲಾಖೆ ಎಚ್ಚರಿಕೆ

ಪಡಿತರ ಧಾನ್ಯ ತರಲು ಹರಸಾಹಸ; ಉಪಕೇಂದ್ರ ಮಾಡಲು ಗ್ರಾಮಸ್ಥರ ಒತ್ತಾಯ