
ಕೊಡಗಿನಲ್ಲಿ ಪ್ರತ್ಯೇಕ ಗಾಂಜಾ ಪ್ರಕರಣ: 8 ಆರೋಪಿಗಳ ಸೆರೆ; 5 ಕೆ.ಜಿ. ಗಾಂಜಾ ವಶ
Team Udayavani, Feb 25, 2023, 6:12 AM IST

ಮಡಿಕೇರಿ: ಕೊಡಗು ಪೊಲೀಸರ ವಿಶೇಷ ತಂಡ ದಾಳಿ ನಡೆಸಿ 2 ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 8 ಮಂದಿ ಪ್ರಮುಖ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿದ್ದು 5 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳು ಕೊಡಗು ಸೇರಿದಂತೆ ನೆರೆಯ ಕೇರಳ ರಾಜ್ಯಕ್ಕೂ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್‌ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ವಿರಾಜಪೇಟೆ ನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಾದಿಕ್(33), ಖಲೀಲ್ (37), ದರ್ಶನ್ (27), ಇಲಿಯಾಸ್(44) ಹಾಗೂ ಮಡಿಕೇರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕರಣ್ ಕುಮಾರ್ (27), ಗಗನ್ (26), ನಿರುಪ್ (27) ಹಾಗೂ ವಿನಯ್ ಅವರನ್ನು ಬಂಧಿಸಿರುವುದಾಗಿ ಎಸ್.ಪಿ. ರಾಮರಾಜನ್ ತಿಳಿಸಿದರು. 2 ಪ್ರಕರಣಗಳಲ್ಲಿ ಒಟ್ಟು 5 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ಮಡಿಕೇರಿಯಲ್ಲಿ ಬಂಧಿತರಾದ ಆರೋಪಿಗಳು ಮೈಸೂರು ಮಂಡಿಮೊಹಲ್ಲಾದಿಂದ ಗಾಂಜಾ ಖರೀದಿ ಮಾಡಿದ್ದು, ಬೈಕ್‌ಗಳ ಮೂಲಕ ಮಾರಾಟ ಮಾಡುತ್ತಿದ್ದರು.
ಒಡಿಸ್ಸಾದಿಂದ ಆಮದು
ವಿರಾಜಪೇಟೆಯಲ್ಲಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಮಾಹಿತಿ ನೀಡಿದಂತೆ ಒಡಿಸ್ಸಾದಿಂದ ರೈಲಿನ ಮೂಲಕ ಗಾಂಜಾ ಆಮದು ಮಾಡಿರುವುದು ಪತ್ತೆಯಾಗಿದೆ. ಒಡಿಸ್ಸಾ ಮೂಲದ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಿ ಬಳಿಕ ರೈಲುಗಳ ಮೂಲಕ ಗಾಂಜಾ ಆಮದು ಮಾಡಿಕೊಳ್ಳುತ್ತಿದ್ದರು. ಸ್ವಲ್ಪ ಪ್ರಮಾಣದ ಗಾಂಜಾವನ್ನು ಮಾರಾಟ ಮಾಡಿರುವುದು ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.
ಕಳೆದ 20 ದಿನಗಳ ಅವಧಿಯಲ್ಲಿ ಜಿಲ್ಲೆಯೆ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ 5 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಗಾಂಜಾ ಮಾರಾಟದ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದರು. ಹೆಚ್ಚುವರಿ ಎಸ್.ಪಿ. ಸುಂದರ್ ರಾಜ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?