ಶಾಲಾ ಕಟ್ಟಡದಿಂದ ಬಿದ್ದು ಯುವಕ ಸಾವು
Team Udayavani, Feb 9, 2023, 5:27 PM IST
ಮಂಜೇಶ್ವರ: ಶಾಲಾ ಕಟ್ಟಡದ ಮೇಲಿರುವ ನೀರಿನ ಟ್ಯಾಂಕ್ ಶುಚೀಕರಿಸುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಉದ್ಯಾವರ ಚೌಕಿ ನಿವಾಸಿ ಮೊದೀನ್ ಅವರ ಪುತ್ರ ಅಹಮ್ಮದ್ ಪವಾಸ್ (21) ಮೃತಪಟ್ಟಿದ್ದಾರೆ.
ಮೃತರು ಮಂಜೇಶ್ವರ ಕರೋಡದಲ್ಲಿರುವ ಸಿರಾಜುಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯ ಬಸ್ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಶಾಲೆಯ ಕಟ್ಟಡದ ಮೇಲಿರುವ ಫೈಬರ್ ಟ್ಯಾಂಕ್ ಶುಚೀಕರಿಸುತ್ತಿದ್ದಾಗ ಘಟನೆ ನಡೆದಿದೆ.
ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.