ಮಂಗಳೂರು ಕುಕ್ಕರ್ ಪ್ರಕರಣ: ಕಾಸರಗೋಡು ಜಿಲ್ಲೆಗೂ ತನಿಖೆ ವಿಸ್ತರಣೆ ಸಾಧ್ಯತೆ
Team Udayavani, Nov 30, 2022, 6:55 AM IST
ಕಾಸರಗೋಡು: ಮಂಗಳೂರು ನಾಗುರಿಯಲ್ಲಿ ನ.19 ರಂದು ನಡೆದ ಕುಕ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ಕೆಲವರಿಗೆ ನಂಟು ಸಾಧ್ಯತೆಯ ಶಂಕೆಯ ಹಿನ್ನೆಲೆಯಲ್ಲಿ ಎನ್.ಐ.ಎ. ತಂಡ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸುವ ಸಾಧ್ಯತೆಯಿದೆ.
ಇದೇ ಶಂಕೆಯಿಂದ ಕಾಸರಗೋಡು ಜಿಲ್ಲೆಯ ಪೊಲೀಸರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕುಕ್ಕರ್ ಪ್ರಕರಣದಿಂದ ಗಾಯಗೊಂಡಿರುವ ಆರೋಪಿ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಚೇತರಿಸುತ್ತಿದ್ದು, ಆತನನ್ನು ಎನ್‌ಐಎ ಸಮಗ್ರ ತನಿಖೆ ನಡೆಸಲಿದೆ.
ವಿಧ್ವಂಸಕ ಕೃತ್ಯಕ್ಕಾಗಿ ಹಣ ಸಂಗ್ರಹಿಸಲು ಕೇರಳದಲ್ಲಿ ಈ ಹಿಂದೆ ಶಾರೀಕ್ ಕೊಚ್ಚಿಯಲ್ಲಿ ಮಾದಕ ದ್ರವ್ಯ ವ್ಯವಹಾರವನ್ನೂ ನಡೆಸಿದ್ದನೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.
ಕಾಸರಗೋಡು ಜಿಲ್ಲೆಯ ಚಂದೇರಾ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಯುವತಿಯರೂ ಸಹಿತ ಸುಮಾರು 10 ರಷ್ಟು ಮಂದಿ ಕೇರಳದಿಂದ ವಿದೇಶಕ್ಕೆ ಹೋಗಿ ಅಲ್ಲಿ ಸಿರಿಯಾ ಮತ್ತು ಅಪಘಾನಿಸ್ತಾನದಲ್ಲಿರುವ ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್) ಗೆ ಸೇರಿದ್ದರು. ಈ ಪೈಕಿ ಕೆಲವರು ದಾಳಿಯಲ್ಲಿ ಸಾವಿಗೀಡಾಗಿದ್ದರು. ಇನ್ನೂ ಕೆಲವರು ಅಪಘಾನಿಸ್ತಾನದ ಕಾರಾಗೃಹದಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ತಂಡಕ್ಕೆ ಸೇರಿದ ಮಂದಿಯೊಂದಿಗೆ ಮಂಗಳೂರು ಕುಕ್ಕರ್ ಪ್ರಕರಣದೊಂದಿಗೆ ಯಾವುದಾದರೂ ರೀತಿಯ ನಂಟು ಇದ್ದಿರಬಹುದೆಂಬ ಬಲವಾದ ಶಂಕೆ ತನಿಖಾ ತಂಡ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ಗುಪ್ತಚರ ಇಲಾಖೆ ನಿರ್ದೇಶಕರ ಮನೆಯಲ್ಲಿ ಸಿಆರ್ ಪಿಎಫ್ ಜವಾನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಅಡೆತಡೆಗಳ ದಾಟಿ ಗೆದ್ದ ‘ತನುಜಾ’
ಮೋದಿ ಉತ್ತರಾಧಿಕಾರಿಯಾಗುತ್ತಾರಾ ಯು.ಪಿ ಸಿಎಂ?: ಯೋಗಿ ಆದಿತ್ಯನಾಥ್ ಹೇಳುವುದೇನು?
ದೇಶದ ಮೊದಲ ಪ್ರಕರಣ: ಮಗುವಿನ ನಿರೀಕ್ಷೆಯಲ್ಲಿ ತೃತೀಯ ಲಿಂಗಿ ದಂಪತಿ
ಅಫ್ರಿದಿ ಮಗಳನ್ನು ವರಿಸಿದ ಶಾಹೀನ್ ಅಫ್ರಿದಿ: ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾದ ಸಹ ಆಟಗಾರರು